ಎರಡು ಕಾರುಗಳ ಅಪಘಾತ

Published on

ಕೊಳ್ಳೇಗಾಲ: ಸತ್ತೇಗಾಲ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಒಬ್ಬ ಮೃತಪಟ್ಟಿದ್ದು. ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಸತ್ತೇಗಾಲ ಗ್ರಾಮದ ನಿವಾಸಿ ನಾಗರಾಜು ಮೃತ. ಸತ್ತೇಗಾಲ ಹ್ಯಾಂಡ್‌ಪೋಸ್ಟ್ ಕಡೆಯಿಂದ ನಾಗರಾಜು ಸೇರಿದಂತೆ ಮೂವರು ಕಾರಿನಲ್ಲಿ ಸತ್ತೇಗಾಲ ಗ್ರಾಮಕ್ಕೆ ತೆರಳುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಬೈಪಾಸ್ ದಾಟುವಾಗ ಬೆಂಗಳೂರಿಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯಿತು. ಕಾರಿನ ಹಿಂಬದಿ ಕುಳಿತಿದ್ದ ನಾಗರಾಜು ಸ್ಥಳದಲ್ಲೇ ಮೃತಪಟ್ಟಿದ್ದು. ಮತ್ತೊಂದು ಕಾರಿನ ಚಾಲಕ, ಅಸ್ಸಾಂ ಮೂಲದ ತನ್ಮಯ ಎಂಬಾತ ಗಾಯಗೊಂಡು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ನಾಗರಾಜು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net