ಎಮ್ಮೆಮಾಡು ಗ್ರಾಪಂಗೆ ಅಸ್ಸಾಂ ಪ್ರತಿನಿಧಿಗಳು ಭೇಟಿ

28.npk-1
Published on

ನಾಪೋಕ್ಲು: ಸುಧಾರಿತ ಆಡಳಿತ, ಪೋಷಣ್ ಅಭಿಯಾನದಲ್ಲಿ ಉತ್ತಮ ಪ್ರಗತಿ ಸಾಧಿಸಿರುವ ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿಗೆ ಅಸ್ಸಾಂ ರಾಜ್ಯದ ಪ್ರತಿನಿಧಿಗಳು ಶನಿವಾರ ಭೇಟಿ ನೀಡಿದ್ದರು.

ಅಸ್ಸಾಂನ ಪ್ರತಿನಿಧಿಗಳಾಗಿ ಸಬೀತಾ ರಾಥೋಡ್, ಮಲ್ಲಿಕಾ, ಪದ್ಮಜಾ (ಸಿಡಿಪಿಒ) ಅವರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿಯ ಆಡಳಿತ ಸುಧಾರಣೆ, ಬಾಪೂಜಿ ಸೇವಾ ಕೇಂದ್ರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ವಿವರ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪೋಷಣ್ ಅಭಿಯಾನದ ಸಮಗ್ರ ಮಾಹಿತಿ ಪಡೆದುಕೊಂಡರು.

ಇದಕ್ಕೂ ಮೊದಲು ಅಸ್ಸಾಂ ರಾಜ್ಯದ ಪ್ರತಿನಿಧಿಗಳನ್ನು ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಐಸಮ್ಮ, ನ್ಯಾಯ ಸಮಿತಿ ಅಧ್ಯಕ್ಷ ಗಫೂರ್, ಸದಸ್ಯರಾದ ಚೆಕ್ಕೇರ ಇಸ್ಮಾಯಿಲ್, ಟಿ.ಕೆ.ಯೂಸುಫ್, ಮಾಹಿನ್ ಕನ್ನಡಿಯಂಡ ಆಯಿಷಾ, ಪಿ.ಎ.ಹಫ್ಸತ್ ಕಂಬೇರ, ಸೀತಾಲಕ್ಷ್ಮೀ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದಕ್ಕಿ, ಕಾರ್ಯದರ್ಶಿ ಪಾರ್ವತಿ, ಮೇಲ್ವಿಚಾರಕಿ ಶೀಲಾ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net