ಎಮ್ಮೆದೊಡ್ಡಿ ಗ್ರಾಪಂಗೆ ಛಾಯಾಪತಿ ಅಧ್ಯಕ್ಷ

kdr GP
ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಛಾಯಪತಿ ಹಾಗೂ ಉಪಾಧ್ಯಕ್ಷೆ ಶೋಭಾ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು.
Published on

ಕಡೂರು: ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರಂಗೇನಹಳ್ಳಿ ಛಾಯಾಪತಿ, ಉಪಾಧ್ಯಕ್ಷರಾಗಿ ಶೋಭಾ ಮಂಗಳವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಜಿಪಂ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಸಾದ್ ಕಾರ್ಯ ನಿರ್ವಹಿಸಿದರು. ಅಭಿನಂದನಾ ಸಭೆಯಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ಪಂಚಾಯಿತಿ ಸದಸ್ಯರ ಸಹಕಾರ ಅಗತ್ಯ ಎಂದರು. ರಮೇಶ್, ಎಲ್.ರವಿ, ಎಚ್.ರೇಣುಕಾ, ಅಮ್ಮಯ್ಯಬಾಯಿ, ಮಂಜುಳಾಬಾಯಿ, ಶಶಿಕುಮಾರ್ ನಾಯ್ಕ, ಪಿಡಿಒ ರಾಮಕೃಷ್ಣ, ಮುಖಂಡರಾದ ಎಮ್ಮೆದೊಡ್ಡಿ ಸೋಮೇಶ್, ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net