ಎಬಿವಿಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ABVP
Published on

ಬೀದರ್: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸನಕ್ಕೆ ಶ್ರಮಿಸುವುದರೊಂದಿಗೆ ರಾಷ್ಟ್ರಭಕ್ತಿ ತುಂಬಾವ ಕಾರ್ಯದಲ್ಲಿ ಎಬಿವಿಪಿ ಸಂಘಟನೆ ತೊಡಗಿದೆ ಎಂದು ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ದ ಜಾಡರ್ ಹೇಳಿದರು.

ನಗರದಲ್ಲಿ ಶನಿವಾರ ಆಯೋಜಿಸಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ಆನ್ ಲೈನ್ ಸದಸ್ಯತ್ವ ಅಭಿಯಾನ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ವಿದ್ಯಾರ್ಥಿಗಳಿಗೆ ತಲುಪುವ ನಿಟ್ಟಿನಲ್ಲಿ ಆನ್ ಲೈನ್ ಸದಸ್ಯ ಅಭಿಯಾನ ರಾಷ್ಟ್ರವ್ಯಾಪಿ ಹಮ್ಮಿಕೊಳ್ಳಲಾಗಿದೆ ಎಂದರು.

ಕರೊನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಂದ ದೂರ ಉಳಿದಿದ್ದು ಅವರಲ್ಲಿ ಆತ್ಮಸ್ಥೈರ್ಯ ಹಾಗೂ ವ್ಯಕ್ತಿತ್ವ ವಿಕಾಸನದ ದೃಷ್ಟಿಯಿಂದ ಆನ್ ಲೈನ್ ಉಪನ್ಯಾಸ ಕೈಗೊಳ್ಳಲಾಗುತಿದ್ದೆ. ಲಾಕ್ ಡೌನ್ ವೇಳೆಗೆ ನಿರಾಶ್ರಿತರಿಗೆ ಆಹಾರ ಸಾಮಗ್ರಿ ವಿತರಣೆ ಮಾಡಲಾಗಿದೆ. ರಕ್ತದಾನ ಶಿಬಿರ, ಕರೊನಾ ವಾರಿಯರ್ಸ್ ಗಳಿಗೆ ಸನ್ಮಾನ ಸೇರಿದಂತೆ ಹಲವರು ಸೇವಾ ಚಟುವಟಿಕೆ ನಡೆಸುವ ಮೂಲಕ ಪರಿಷತ್ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದರು.

ಎಬಿವಿಪಿ ನಗರ ಉಪಾಧ್ಯಕ್ಷ ಅನೀಲ ಚೌಧರಿ ಮಾತನಾಡಿ, ಅ.24 ರವರಗೆ ಅಭಿಯಾನ ನಡೆಯಲಿದೆ. ಸಂಘಟನೆ ಸೇರಲು ಎಬಿವಿಪಿ ವೆಬ್ ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಗಾಗಿ 9916550367/97433222050 ಸಂಪರ್ಕಿಸಲು ತಿಳಿಸಿದ್ದಾರೆ.

ಅಭಿಯಾನಕ್ಕೆ ಯುವ ಉದ್ಯಮಿ ವಿವೇಕ್ ದೀಪಕ ವಾಲಿ ಚಾಲನೆ ನಿಡಿದರು. ಸನ್ ಸಾಪ್ಟ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಎಸ್. ಆಣದೂರೆ, ಉಪನ್ಯಾಸಕ ಪ್ರಶಾಂತ ದೇಸಾಯಿ, ಎಬಿವಿಪಿ ನಗರ ಕಾರ್ಯದರ್ಶಿ ವಿಕಾಸ ಚೋರಮಲ್ಲೆ, ರಾಜ್ಯಕಾರ್ಯಕಾರಣಿ ಸದಸ್ಯ ಅಮರ ಸುಲ್ತಾನಪುರೆ, ಹನಮುಪಾಜಿ, ಮಹೆಶ ಚೌದರಿ, ಸೂರಜ ಚಿದ್ರೆ, ಸಾಯಿ ಮೂಲಗೆ ಇದ್ದರು. ಅರವಿಂದ ಸುಂದಾಳಕರ್ ಸ್ವಾಗತಿಸಿದರು. ರಮೇಶ ಮಿರಾಜಪುರೆ ನಿರೂಪಣೆ ಮಾಡಿದರು. ಜಗಮೋಹನರಡ್ಡಿ ವಂದಿಸಿದರು.

ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ಎಬಿವಿಪಿ ಕಾರ್ಯ ಶ್ಲಾಘನೀಯ. ಪರಿಷತ್ ಹಮ್ಮಿಕೊಂಡಿರುವ ಆನ್ ಲೈನ್ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸದಸ್ಯತ್ವ ಪಡೆದುಕೊಳ್ಳಬೇಕು.| ವಿವೇಕ್ ವಾಲಿ, ಯುವ ಉದ್ಯವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net