ಎಬಿವಿಪಿ ವತಿಯಿಂದ ಬೃಹತ್ ತಿರಂಗಾ ಯಾತ್ರೆ

gld 25-2 tiranga
ಗುಳೇದಗುಡ್ಡ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಸುಭಾಸ ಚಂದ್ರ ಭೋಸ್ ಅವರ ಜಯಂತಿ ಅಂಗವಾಗಿ ಎಬಿವಿಪಿ ವತಿಯಿಂದ ಬೃಹತ್ ತಿರಂಗಾ ಯಾತ್ರೆ ನಡೆಯಿತು.
Published on

ಗುಳೇದಗುಡ್ಡ: ಸ್ವಾಮಿ ವಿವೇಕಾನಂದ ಹಾಗೂ ನೇತಾಜಿ ಸುಭಾಸ ಚಂದ್ರ ಬೋಸ್ ಅವರ ಜನ್ಮದಿನ ನಿಮಿತ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶನಿವಾರ ಪಟ್ಟಣದ ಸರ್ಕಾರಿ ಬಾಲಕರ ಪಪೂ ಕಾಲೇಜಿನ ಮೈದಾನದಿಂದ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು.

ಎಬಿವಿಪಿ ವಿಜಯಪುರ ಪ್ರಾಂತ ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ ಯಾತ್ರೆಗೆ ಚಾಲನೆ ನೀಡಿದರು.

250 ಮೀಟರ್ ಉದ್ದದ ತಿರಂಗ ಧ್ವಜದೊಂದಿಗೆ ಕಾಲೇಜಿನಿಂದ ಪ್ರಾರಂಭಗೊಂಡ ಯಾತ್ರೆ, ಭಾರತ ಮಾರ್ಕೆಟ್, ಪುರಸಭೆ, ಸರಾಫ್ ಬಜಾರ, ಕಂಠಿಪೇಟೆ, ಗಚ್ಚಿನಕಟ್ಟಿ, ಚೌಬಜಾರ, ಅರಳಿಕಟ್ಟಿ, ಗುಗ್ಗರಿಪೇಟೆ, ಕಮತಗಿನಾಕಾ ವೃತ್ತ, ಬಸವೇಶ್ವರ ನಗರ, ಹರದೊಳ್ಳಿ, ಗುಂಡದ ಭಾವಿ, ಮರಡಿ ಮಠ, ಪವಾರಕ್ರಾಸ್, ನಡುವಿನಪೇಟೆ, ಗಣೇಶ ದೇವಸ್ಥಾನ ಮೂಲಕ ಮರಳಿ ಕಾಲೇಜು ತಲಪಿತು.

ಮೆರವಣಿಗೆಯಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಿರಂಗ ಧ್ವಜ ಹಿಡಿದು, ಭಾರತ ಮಾತಾಕಿ ಜೈ, ವಂದೇ ಮಾತರಂ ಘೋಷಣೆ ಕೂಗಿ ಗಮನಸೆಳೆದರು.

ಎಬಿವಿಪಿ ನಗರ ಅಧ್ಯಕ್ಷ ರವಿ ಉಪ್ಪಾರ, ಜಿಲ್ಲಾ ಸಂಚಾಲಕ ಪ್ರಥಮೇಶ ವಾಘಮೋಡೆ, ಅಮಿತ್ ವಾಳದ, ಗೌರೀಶ ಖೋತ, ಅಪ್ಪು ಚವಾಣ್, ಪ್ರವೀಣ ರಾಠೋಡ, ಮೈತ್ರಿ ರಾಜನಾಳ, ಮಂಜು ರಾಠೋಡ, ಶಶಾಂಕ ಸಿಂದಗಿ, ಆಕಾಶ ತಿಪ್ಪಾ, ಸುಧೀಪ ಬಂಡಿ, ಪ್ರಥಮೇಶ ಪವಾರ, ಲಕ್ಷ್ಮಣ ಭಜಂತ್ರಿ, ಪವನ ಉಂಕಿ, ಶಂಕ್ರಮ್ಮ ಮುರಗೋಡ, ಅಶ್ವರ್ಯ ಅರುಟಗಿ, ಆಕಾಶ ಚವಾಣ್, ದೀಪಾ ಕವಡಿಮಟ್ಟಿ, ದೀಪಕ ರಾಠೋಡ, ಈರಣ್ಣ ಹಡಪದ, ವಿಶಾಲ ದಿಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net