ಎಬಿಆರ್‌ಕೆ ಸೌಲಭ್ಯ ಸದುಪಯೋಗಕ್ಕೆ ಡಿಎಸ್ ಮನವಿ

CTD DR.S.P.RAVINIDRA----
Published on

ಚಿತ್ರದುರ್ಗ:ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಎಬಿಆರ್‌ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ.ರವೀಂದ್ರ ಕೋರಿದ್ದಾರೆ. ರೋಗಿಗಳು ಆಸ್ಪತ್ರೆಗೆ ಬರುವಾಗ ತಪ್ಪದೇ ಆಧಾರ್,ರೇಷನ್ ಕಾರ್ಡ್‌ಗಳು ನಕಲು ಪ್ರತಿಗಳನ್ನು ತೆಗೆದು ಕೊಂಡು ಬರಬೇಕು. ಒಳರೋಗಿಗಳಾಗಿ ದಾಖಲಾಗುವಾಗ ತಪ್ಪದೇ ಎಬಿಆರ್‌ಕೆ ಕೊಠಡಿಯಲ್ಲಿ ನೋಂದಾಯಿಸುವ ಅರ್ಹ ಫಲಾನುಭ ವಿಗಳಿಗೆ ರಕ್ತ ಪರೀಕ್ಷೆ,ಸಿಟಿ ಸ್ಕ್ಯಾನ್,ಎಕ್ಸ್-ರೇ, ಸ್ಕ್ಯಾನಿಂಗ್,ಆರ್ಥೋಇಂಪ್ಲಾಂ ಟ್,ಔಷಧ ಮತ್ತು ಮಾತ್ರೆಗಳನ್ನು ಉಚಿತವಾಗಿ ನೀಡಲಾ ಗುವುದು. ರೋಗಿಗಳು ಈಚೆಗೆ ನೇರ ಖಾಸಗಿ ಆಸ್ಪತ್ರೆಗಳಿಗೆ ತೆರಳಿ ನಂತರ ರೆಫರೆಲ್‌ಗೆ ವೈದ್ಯಾಧಿಕಾರಿಗಳಿಗೆ ಒತ್ತಡ ತರುತ್ತಿದ್ದಾರೆ. ಈ ರೀತಿ ಮಾಡದೇ ಮೊದಲು ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಅಗತ್ಯ ಚಿಕಿತ್ಸೆ ಲಭ್ಯವಿಲ್ಲದಿದ್ದಾಗ ಎಬಿಆರ್‌ಕೆ ಅಡಿ ರೆಫರೆಲ್ ಮಾಡಿ ಕೊಡಲಾಗುವುದು.ಆಸ್ಪತ್ರೆಯಲ್ಲಿ ಯಾವುದೇ ಮಧ್ಯವರ್ತಿಗೆ ಹಣ ನೀಡಬೇಕಾಗಿಲ್ಲ. ಹಣ ಕೇಳಿದರೆ ತಮಗೆ ತಿಳಿಸುವಂತೆ(9448943 163)ಡಿಎಸ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net