ಎಫ್​ಎಂಸಿಜಿ ಉದ್ಯಮಕ್ಕೆ ವಿಪುಲ ಅವಕಾಶ

h14-Railway stall 1
Published on

ಹುಬ್ಬಳ್ಳಿ: ವೇಗವಾಗಿ ಬಳಕೆಯಾಗುವ ಗ್ರಾಹಕ ಸರಕು(ಫಾಸ್ಟ್ ಮೂವಿಂಗ್ ಕಂಜುಮರ್ ಗೂಡ್ಸ್- ಎಫ್​ಎಂಸಿಜಿ)ಗಳ ಉತ್ಪಾದನೆ ಕಂಪನಿಗಳು ಉತ್ತರ ಕರ್ನಾಟಕದಲ್ಲಿ ಸ್ಥಾಪನೆಯಾಗುವ ಕುರಿತು ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಗಂಭೀರ ಚರ್ಚೆ ನಡೆಯಿತು.

ಜ್ಯೋತಿ ಲ್ಯಾಬರೋಟರಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಉಲ್ಲಾಸ ಕಾಮತ್ ಅವರ ನಿರ್ವಹಣೆಯಲ್ಲಿ ನಡೆದ ಸಂವಾದದಲ್ಲಿ ಅಲ್​ಪ್ಲಾ ಇಂಡಿಯಾ ಲಿಮಿಟೆಡ್​ನ ಎಂಡಿ ವಾಗೀಶ ದೀಕ್ಷಿತ್, ಮಾಪೆ ಅಡ್ವೈಸರಿಯ ಎಂಡಿ ಜಾಕೋಬ್ ಮ್ಯಾಥಿವ್, ನೆಲ್ಸನ್ ಇಂಡಿಯಾ ಲಿಮಿಟೆಡ್ ನಿರ್ದೇಶಕ ಶ್ರೀಪ್ರಕಾಶ ಶ್ರೀಧರನ್, ಹಾಂಗ್ಯೋ ಐಸ್ಕ್ರೀಮ್ ಎಂ.ಡಿ ಪ್ರದೀಪ ಪೈ ಚರ್ಚೆ ನಡೆಸಿದರು.

ಗೌಹಾತಿಯಲ್ಲಿ ಎಫ್​ಎಂಸಿಜಿ ಕ್ಲಸ್ಟರ್ ಬಹು ಯಶಸ್ವಿಯಾಗಿ ನಡೆಯುತ್ತಿದೆ. ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ರಾಜ್ಯದ ನಿಯೋಗ ವೀಕ್ಷಣೆ ಮಾಡಿ ಬಂದಿದೆ. ಅಲ್ಲಿ ಒಂದೇ ಕಡೆ ಸಾವಿರಾರು ಕಂಪನಿ ಇದ್ದು, ಮೂರು ಲಕ್ಷ ಉದ್ಯೋಗಿಗಳಿದ್ದಾರೆ. ಅದೇ ರೀತಿ ಇಲ್ಲಿ ಎಫ್​ಎಂಸಿಜಿ ಕ್ಲಸ್ಟರ್ ಸ್ಥಾಪನೆಗೆ 500- 600 ಎಕರೆ ಜಮೀನು ಮೀಸಲಿಡಬೇಕು. ಎಲ್ಲ ಸೌಲಭ್ಯಗಳನ್ನು ಒಂದೆಡೆ ಒದಗಿಸುವ ವ್ಯವಸ್ಥೆಯಾಗಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಉಲ್ಲಾಸ ಕಾಮತ್ ಮಾತನಾಡಿ, ವಿಆರ್​ಎಲ್ ಲಾಜಿಸ್ಟಿಕ್ಸ್ ಸಾರಿಗೆ ಕ್ಷೇತ್ರಕ್ಕೆ ಗಾಡ್ ಗಿಫ್ಟ್. ಇಲ್ಲಿ ಎಫ್​ಎಂಸಿಜಿ ಪಾರ್ಕ್ ಸ್ಥಾಪನೆಯಾದರೆ ಸರಕು ಸಾಗಣೆಗೆ ನೆರವಾಗಲಿದೆ. ಒಟ್ಟಾರೆ ಎಫ್​ಎಂಸಿಜಿ ಕಾರ್ಯಾಚರಣೆಗೆ ಯಾವುದೇ ಸಮಸ್ಯೆ ಇಲ್ಲಿ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ವಾಗೀಶ ದೀಕ್ಷಿತ್ ಮಾತನಾಡಿ, ಯಾವುದೇ ವಸ್ತು ರಫ್ತು ಮಾಡುವುದಿದ್ದರೆ ಪ್ಯಾಕೇಜಿಂಗ್ ಬಹಳ ಮಹತ್ವದ್ದು. ಸರಿಯಾದ ಪ್ಯಾಕೇಜಿಂಗ್ ಇಲ್ಲ ಎಂದರೆ ತರಕಾರಿಯಂಥವು ಶೇ. 40ರಷ್ಟು ಕೆಟ್ಟು ಹೋಗುವ ಪರಿಸ್ಥಿತಿ ಈಗ ಇದೆ. ಪ್ಯಾಕೇಜಿಂಗ್ ಉದ್ಯಮ ಸಾಮಾನ್ಯ ಜನರಿಗೂ ಉದ್ಯೋಗ ಕೊಡುತ್ತದೆ ಎಂದರು.

ಎಫ್​ಎಂಸಿಜಿಗೆ ಶಾಂತಿಯುತ ವಾತಾವರಣ ಬೇಕು. ಅಂತಹ ಪರಿಸರ ಇಲ್ಲಿದೆ. ಸರ್ಕಾರ ಎಲ್ಲ ರೀತಿಯ ಬೆಂಬಲ ನೀಡಿ ಉದ್ಯಮಿಗಳನ್ನು ಸ್ವಾಗತಿಸಬೇಕು ಎಂದರು.

ಶ್ರೀಪ್ರಕಾಶ ಶ್ರೀಧರನ್ ಮಾತನಾಡಿ, ಕೇವಲ ಮೂರು ವರ್ಷದಲ್ಲಿ ಬೃಹತ್ ಮಟ್ಟದಲ್ಲಿ ಬೆಳೆಯಬಲ್ಲ ಶಕ್ತಿ ಎಫ್​ಸಿಎಂಜಿಗೆ ಇದೆ. ಶೇ. 50ಕ್ಕಿಂತ ಹೆಚ್ಚು ಮಹಿಳೆಯರೇ ಉದ್ಯೋಗದಲ್ಲಿ ತೊಡಗುವ ಅವಕಾಶ ಇಲ್ಲಿದೆ. ಸಾರಿಗೆ, ಮೂಲ ಸೌಲಭ್ಯ, ಇಲ್ಲಿಯ ವಾತಾವರಣ ಪೂರಕವಾಗಿದೆ ಎಂದರು.

ಪ್ರದೀಪ ಪೈ ಮಾತನಾಡಿ, ಹಾಂಗ್ಯೋ ಐಸ್ಕ್ರೀಂ ಬೆಲೆ, ಉತ್ಪಾದನೆ ಹಾಗೂ ಪೂರೈಕೆಯಲ್ಲಿ 12 ಟಾಪ್ ಕಂಪನಿಗಳಲ್ಲಿ ಒಂದು ಎಂದು ಗುರುತಿಸಿಕೊಂಡಿದೆ. 17 ವರ್ಷ ಅನುಭವ ಹೊಂದಿರುವ ಕಂಪನಿ, ಗುಣಮಟ್ಟದ ವಸ್ತು ಕೊಟ್ಟರೆ ಜನ ಸ್ವೀಕರಿಸುತ್ತಾರೆ ಎಂಬುದನ್ನು ಮನಗಂಡಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಂಪನಿ ಸ್ಥಾಪನೆಯಿಂದ ಹೆಚ್ಚಿನ ತಲೆ ನೋವು ಇರುವುದಿಲ್ಲ. ಆದರೆ, ಸರ್ಕಾರದ ಕ್ಲೀಯರನ್ಸ್​ಗಳು ಒಂದಿಷ್ಟು ವೇಗ ಪಡೆಯಬೇಕಾಗಿದೆ ಎಂದರು.

ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಬರಮಕ್ಕನವರ, ಇತರರು ಇದ್ದರು.

ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, ಎಫ್​ಎಂಸಿಜಿ ಈ ಭಾಗದಲ್ಲಿ ಬೆಳೆಯಲು ಹಾಗೂ ಸರಕು ಸಾಗಣೆ ಕುರಿತಂತೆ ಇತ್ತೀಚೆಗೆ ವಿಆರ್​ಎಲ್ ಜೊತೆ ಸಭೆ ಮಾಡಿಸಿದ್ದೇನೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲ ಬೆಳಗಾವಿ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ ಸೇರಿ ಹಲವು ಜಿಲ್ಲೆಗಳನ್ನು ಗುರಿಯಾಗಿಸಿಕೊಂಡು ಹೂಡಿಕೆದಾರರನ್ನು ಸೆಳೆಯಲಾಗಿದೆ. ಒಟ್ಟಾರೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಹೂಡಿಕೆ ಮಾಡಲು ಕಂಪನಿಗಳು ಆಸಕ್ತಿ ತೋರಿದವು. ಇದರಿಂದ ಉದ್ಯಮಗಳ ಕೇಂದ್ರೀಕರಣ ತಪ್ಪಿ, ತೃಪ್ತಿಕರ ಹಂಚಿಕೆ ಸಾಧ್ಯವಾಗಿರುವಂತೆ ಕಂಡುಬಂದಿದೆ. ಪ್ರದೀಪ ಪೈ

ಶೆಟ್ಟರ್, ಜೋಶಿ ಪ್ರಯತ್ನಕ್ಕೆ ಫಲ

ಹುಬ್ಬಳ್ಳಿ: ರಾಜ್ಯ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹಾಗೂ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರ ನಿರಂತರ ಪ್ರಯತ್ನದ ಫಲವಾಗಿ ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಆಯೋಜನೆಗೊಂಡಿದ್ದ ಹೂಡಿಕೆದಾರರ ಸಮಾವೇಶ ‘ಇನ್ವೆಸ್ಟ್ ಕರ್ನಾಟಕ- ಹುಬ್ಬಳ್ಳಿ’ ಯಶಸ್ವಿಯಾಗಿದೆ.

ಈ ಮೂಲಕ ಜಗದೀಶ ಶೆಟ್ಟರ್ ಅವರಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಸ್ಥಾನ ಸಿಕ್ಕಿರುವುದರಿಂದ ರಾಜ್ಯದ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲು ಸಾಧ್ಯವಾಗಿದೆ ಎನ್ನಬಹುದು.

ಸಮಾವೇಶಕ್ಕಾಗಿ ಇಬ್ಬರು ಸಚಿವರು ತಿಂಗಳಿಂದ ವಿವಿಧ ಮಟ್ಟದಲ್ಲಿ ಮಾತುಕತೆ, ಪ್ರವಾಸದ ಮೂಲಕ ನೂರಾರು ಕಂಪನಿಗಳನ್ನು ಕರೆ ತರುವಲ್ಲಿ ಯಶ ಕಂಡಿದ್ದಾರೆ.

ಅದೇ ರೀತಿ ಶುಕ್ರವಾರ ನಡೆದ ಸಮಾವೇಶದಲ್ಲಿ 51 ಕಂಪನಿಗಳು ಒಡಂಬಡಿಕೆ ಕೂಡ ಮಾಡಿಕೊಂಡಿದ್ದು, 72 ಸಾವಿರ ಕೋಟಿ ರೂ. ಬಂಡವಾಳ ಹರಿದು ಬರುವ ನಿರೀಕ್ಷೆ ಮೂಡಿದೆ.

ಸಚಿವ ಶೆಟ್ಟರ್ ತಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ಮೇಲಿಂದ ಮೇಲೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿದ್ದು, ಸಾಕಷ್ಟು ತಯಾರಿ ಮಾಡಿಕೊಂಡರು. ಸಿಎಂ ಯಡಿಯೂರಪ್ಪ ಅವರೊಂದಿಗೆ ನಡೆಸಿದ ಮಹತ್ವದ ದಾವೋಸ್ ಭೇಟಿ ಕೂಡ ಫಲ ನೀಡಿತು.

ಕೇಂದ್ರ ಸಚಿವ ಜೋಶಿ ಅವರೊಂದಿಗೆ ಸೇರಿ ಹೈದರಾಬಾದ್, ಮುಂಬೈ, ಗೌಹಾತಿ ಮುಂತಾದೆಡೆ ನಿಯೋಗ ತೆರಳಿ ರೋಡ್ ಶೋ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಹೂಡಿಕೆದಾರರ ಗಮನ ಸೆಳೆದಿದ್ದರು. ಪ್ರಲ್ಹಾದ ಜೋಶಿ ಅವರು ತಮ್ಮ ಇಲಾಖೆ ಮೂಲಕ ಹಲವು ಉದ್ಯಮಪತಿಗಳನ್ನು ಸಂರ್ಪಸಿ ಆಹ್ವಾನ ನೀಡಿದ್ದರು.

ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಹದಿನೈದು ವರ್ಷ ಹಿಂದೆ ಧಾರವಾಡದ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ತಮಗೆ ಉತ್ತರ ಕರ್ನಾಟಕದ ಭೂಗೋಳಿಕ, ಸಾಮಾಜಿಕ, ಆರ್ಥಿಕ ಪರಿಚಯವಿದೆ. ಈ ಭಾಗದ ಅಭಿವೃದಿಟಛಿ ನಮ್ಮೆಲ್ಲರ ಕನಸಾಗಿದೆ. ಇಲ್ಲಿ ಸಮಾವೇಶ ನಡೆಯುತ್ತಿರುವುದು ಹೊಸ ಭರವಸೆ ಹುಟ್ಟಿಸಿದೆ ಎಂದರು.

ಕೈಗಾರಿಕಾ ಅಭಿವೃದಿಟಛಿ ಆಯುಕ್ತೆ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ನಿರ್ದೇಶಕಿ ಗುಂಜನ್ ಕೃಷ್ಣ ಅವರು ಪಿಪಿಟಿ ಪ್ರಾತ್ಯಕ್ಷಿಕೆ ಮೂಲಕ ಹುಬ್ಬಳ್ಳಿ ಧಾರವಾಡ, ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳ ಪರಿಚಯ ಮಾಡಿಕೊಟ್ಟರು. ಇದರಿಂದ ಭವಿಷ್ಯದಲ್ಲಿ ಈ ಭಾಗಕ್ಕೆ ಬರಲು ಆಸಕ್ತರಾಗಿರುವ ಹೂಡಿಕೆದಾರರಿಗೆ ಅಗತ್ಯ ಮಾಹಿತಿಗಳು ಸಿಕ್ಕಿದ್ದು, ಇನ್ನೂ ಹೆಚ್ಚಿನ ಸಣ್ಣ-ದೊಡ್ಡ ಕೈಗಾರಿಕೆಗಳ ಸ್ಥಾಪನೆಯನ್ನು ನಿರೀಕ್ಷಿಸಬಹುದಾಗಿದೆ.

ಹೊಸ ಕೈಗಾರಿಕೆ ನೀತಿಯಲ್ಲಿ ದ್ವಿತೀಯ, ತೃತೀಯ ಹಂತದ ನಗರಗಳಲ್ಲಿ ಉದ್ಯಮ ಸ್ಥಾಪನೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿರುವುದು ಸಹ ಆಶಾದಾಯಕವಾಗಿದೆ.

ಆರೋಗ್ಯ ಕಾಳಜಿ ಕಂಪನಿ

ಸ್ಕೈ ಕ್ಲಿಪ್ ಐಟಿ ಇದು ಅಮೆರಿಕ ಮೂಲದ ಆರೋಗ್ಯ ಕಾಳಜಿ ಕಂಪನಿಯಾಗಿದ್ದು, ಧಾರವಾಡದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಕಂಪನಿ ಆರಂಭಿಸಲು ನಿರ್ಧರಿಸಿದ್ದೇವೆ. ಆ ಮೂಲಕ 1500 ಜನರಿಗೆ ಉದ್ಯೋಗ ದೊರೆಯಲಿದೆ. ಹೊಸ ಕೈಗಾರಿಕೆಗಳ ಆರಂಭಕ್ಕೆ ಇನ್ವೆಸ್ಟ್ ಕರ್ನಾಟಕ ಉತ್ತಮ ಅವಕಾಶ ಒದಗಿಸಿದೆ. ಇದರಿಂದ ಉತ್ತರ ಕರ್ನಾಟಕದ ಅಭಿವೃದಿಟಛಿ ಸಾಧ್ಯವಾಗುತ್ತದೆ. | ಹರ್ಷಾ ಎಸ್.ಎಂ., ಸ್ಕೈಕ್ಲಿಪ್ ಐಟಿ ಧಾರವಾಡ

ಉತ್ತರ ಕರ್ನಾಟಕಕ್ಕೆ ಬಹಳಷ್ಟು ಅನುಕೂಲ

ಕಿತ್ತೂರು ಕೈಗಾರಿಕಾ ಪ್ರದೇಶದಲ್ಲಿ ರೇಲ್ ಕೋಚ್ ತಯಾರಿಕಾ ಘಟಕ ಬರಲಿದೆ. ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿದರೆ ರೈಲ್ವೆ ವೆಂಡರ್ ಪೂರೈಕೆ ಮಾಡಲು ಸುಲಭವಾಗಲಿದೆ. ಇದಕ್ಕೆ ಅವಕಾಶ ದೊರಕಿದ್ದು, ಇಂಥ ಸಮಾವೇಶದಿಂದ. ಹಾಗಾಗಿ ಇನ್​ವೆಸ್ಟ್ ಕರ್ನಾಟಕದಿಂದ ಉತ್ತರ ಕರ್ನಾಟಕಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಏಕಗವಾಕ್ಷಿ ಯೋಜನೆ ಅಡಿ ಉದ್ಯಮಿಗಳಿಗೆ ಸವಲತ್ತು ಸಿಗುವಂತಾಗಬೇಕು. ಇದರಿಂದ ಶೀಘ್ರ ಕೈಗಾರಿಕೆ ಸ್ಥಾಪನೆ ಮಾಡಿ ಆರಂಭಿಸಲು ಅನುಕೂಲವಾಗಲಿದೆ.| ಶಿರೀಷ್ ಉಪ್ಪಿನ್ ಅಪೆಕ್ಸ್ ಆಟೊ ಲಿ.ನ ಮಾಜಿ ಸಹಾಯಕ ಪ್ರಧಾನ ವ್ಯವಸ್ಥಾಪಕ

ಹೂಡಿಕೆದಾರರನ್ನು ಸೆಳೆದ ರೈಲ್ವೆ ಮಳಿಗೆ

ಸಮಾವೇಶದಲ್ಲಿ ತೆರೆದಿದ್ದ ರೈಲ್ವೆ ಇಲಾಖೆಯ ಮಳಿಗೆಗೆ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಭೇಟಿ ನೀಡಿ ಪರಿಶೀಲಿಸಿದರು. ಭಾರತೀಯ ರೈಲ್ವೆಗೆ ವಿವಿಧ ಸರಕುಗಳನ್ನು ಉತ್ಪಾದಿಸುವ ಮತ್ತು ವಿತರಿಸುವ ಅಂದಾಜು 30 ಕಂಪನಿಗಳು ಸಮಾವೇಶದಲ್ಲಿ ಭಾಗವಹಿಸಿದ್ದವು.

ಎಮರ್ಜೆನ್ಸಿ ಬ್ರೆಕ್ ಎಕ್ಸಿಲೇಟರ್, ಸ್ಪೀಡ್ ಸೆನ್ಸಾರ್ ಜಿ. 16, ಬ್ರೆಕ್ ಸಿಲಿಂಡರ್, ವಿಎಚ್​ಎಫ್ ಟ್ರಾನ್ಸಿಮೀಟರ್, ಸರ್ಜ್ ಪ್ರೊಟೆಕ್ಷನ್ ಡಿವೈಸ್ ಸೇರಿ 60ಕ್ಕೂ ಹೆಚ್ಚು ರೈಲ್ವೆಗೆ ಬೇಕಾದ ಉತ್ಪನ್ನಗಳನ್ನು ಮಳಿಗೆಯಲ್ಲಿ ಪ್ರದರ್ಶಿಸಲಾಗಿತ್ತು. ಹಲವಾರು ಬಂಡವಾಳ ಹೂಡಿಕೆದಾರರು ಮಳಿಗೆಗೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು. ವಿವಿಧ ಕಂಪನಿಗಳ ಪ್ರತಿನಿಧಿಗಳೊಂದಿಗೆ ರ್ಚಚಿಸಿದರು. ರೈಲ್ವೆಗೆ ಅಗತ್ಯವಿರುವ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳಿಗೆ ಅಗತ್ಯ ಸಹಕಾರ ನೀಡಲಾಗುವುದಾಗಿ ಸಚಿವರು ಭರವಸೆ ನೀಡಿದರು. ಕಿತ್ತೂರಿನ ಬಳಿ ರೈಲುಗಳ ವಿಶೇಷ ಬಿಡಿಭಾಗಗಳ ತಯಾರಿಕೆ ಕೇಂದ್ರ ಸ್ಥಾಪಿಸಲಾಗುತ್ತಿದೆ. ರೈಲ್ವೆ ಉತ್ಪನ್ನಗಳನ್ನು ತಯಾರಿಸುವ ಸಂಸ್ಥೆಗಳು ಅಲ್ಲಿಯೂ ಉತ್ಪಾದನಾ ಕೇಂದ್ರ ಸ್ಥಾಪಿಸಬಹುದು ಎಂದು ಸಲಹೆ ನೀಡಿದರು. ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಎ.ಕೆ. ಸಿಂಗ್, ಹಿರಿಯ ಅಧಿಕಾರಿಗಳಾದ ಪಿ.ಸಿ. ಶರ್ವ, ಪಿ. ರವಿಕುಮಾರ, ಜಿ.ವಿ. ನಾರಾಯಣ ಮೂರ್ತಿ, ಎ.ಕೆ. ಚಂದ್ರಾ ಮತ್ತಿತರರು ಭಾಗವಹಿಸಿದ್ದರು. ಸ್ಥಳೀಯವಾಗಿ ಖರೀದಿಯಲ್ಲಿ ಭಾರತೀಯ ರೈಲು ದೇಶದ ದೊಡ್ಡ ಗ್ರಾಹಕವಾಗಿದೆ. 2018-19ರಲ್ಲಿ 72,362 ಕೋಟಿ ಮೌಲ್ಯದ ವಸ್ತುಗಳ ಖರೀದಿ ಪ್ರಕ್ರಿಯೆ ನಡೆದಿದ್ದು, ಇದರಲ್ಲಿ ಶೇ. 98ರಷ್ಟು ವಸ್ತುಗಳು ಸ್ಥಳೀಯ ಉತ್ಪಾದನೆಯಾಗಿವೆ.

ಉದ್ಯಮ ಜಗತ್ತಿನ ದಿಗ್ಗಜರು

ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿ ಉದ್ಯಮ ಜಗತ್ತಿನ ದಿಗ್ಗಜರು, ಹೂಡಿಕೆದಾರರು ಪಾಲ್ಗೊಂಡಿದ್ದರು. ಪ್ರತಿಷ್ಠಿತ ಉದ್ಯಮಗಳಾದ ಹಿಂದುಜಾ ಗ್ರುಪ್, ಮಹೀಂದ್ರಾ ಗ್ರುಪ್, ಗುಜರಾತ್ ಅಂಬುಜಾ ಗ್ರುಪ್ ಪ್ರತಿನಿಧಿಗಳು, ಟಾಟಾ ಹಿಟಾಚಿಯ ಸಂದೀಪ ಸಿಂಗ್, ಏಕಸ್ ಸಿಇಒ ಅರವಿಂದ ಮೆಳ್ಳಿಗೇರಿ, ರಾಜೇಶ ಎಕ್ಸ್​ಫೋರ್ಟ್ಸ್​ನ ರಾಜೇಶ ಮೆಹ್ತಾ, ಹೈದರಾಬಾದ್​ನ ಸೋನಾಲಿ ಪವರ್ ಪ್ರೖೆವೇಟ್ ಲಿಮಿಟೆಡ್ ಕಂಪನಿಯ ಎಂಡಿ ಅಮೀರ್, ಐಒಸಿ.ಎಚ್​ಪಿಸಿಎಲ್, ಡೊಡ್ಲಾ ಡೈರಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ವಾತಾವರಣ ಚೆನ್ನಾಗಿದೆ

ಕೈಗಾರಿಕೆಗಳ ಆರಂಭಕ್ಕೆ ಎರಡನೇ ದರ್ಜೆಯ ನಗರ ಉತ್ತಮವಾಗಿದ್ದು, ಇಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಬಹುದು. ಇಲ್ಲಿ ಹೇರಳವಾದ ಮಾನವ ಸಂಪನ್ಮೂಲವಿದೆ. ವಾತಾವರಣವೂ ಚೆನ್ನಾಗಿದೆ. ಬೆಂಗಳೂರಿಗಿಂತ ಇಲ್ಲಿ ಬಂದು ಕೆಲಸ ಮಾಡಲು ಜನ ಇಷ್ಟಪಡುತ್ತಾರೆ. ಈ ಭಾಗದಲ್ಲಿ ನಮ್ಮ ಕೈಗಾರಿಕೆ ಸ್ಥಾಪಿಸಲು ಉತ್ಸುಕನಾಗಿದ್ದೇನೆ.| ಸಂದೀಪ ಸಿಂಗ್, ಎಂಡಿ, ಟಾಟಾ ಹಿಟಾಚಿ

ಬಂಡವಾಳ ಹರಿದು ಬರುವ ಭರವಸೆ ಹೆಚ್ಚಿಸಿದ ಸಮಾವೇಶ

ಕಿತ್ತೂರು ಕೈಗಾರಿಕಾ ಪ್ರದೇಶದಲ್ಲಿ ರೇಲ್ ಕೋಚ್ ತಯಾರಿಕಾ ಘಟಕ ಬರಲಿದೆ. ಇಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿದರೆ ರೈಲ್ವೆ ವೆಂಡರ್ ಪೂರೈಕೆ ಮಾಡಲು ಸುಲಭವಾಗಲಿದೆ. ಇದಕ್ಕೆ ಅವಕಾಶ ದೊರಕಿದ್ದು, ಇಂಥ ಸಮಾವೇಶದಿಂದ. ಹಾಗಾಗಿ ಇನ್​ವೆಸ್ಟ್ ಕರ್ನಾಟಕದಿಂದ ಉತ್ತರ ಕರ್ನಾಟಕಕ್ಕೆ ಬಹಳಷ್ಟು ಅನುಕೂಲವಾಗಲಿದೆ. ಏಕಗವಾಕ್ಷಿ ಯೋಜನೆ ಅಡಿ ಉದ್ಯಮಿಗಳಿಗೆ ಸವಲತ್ತು ಸಿಗುವಂತಾಗಬೇಕು. ಇದರಿಂದ ಶೀಘ್ರ ಕೈಗಾರಿಕೆ ಸ್ಥಾಪನೆ ಮಾಡಿ ಆರಂಭಿಸಲು ಅನುಕೂಲವಾಗಲಿದೆ.| ಶಿರೀಷ್ ಉಪ್ಪಿನ್ ಅಪೆಕ್ಸ್ ಆಟೊ ಲಿ.ನ ಮಾಜಿ ಸಹಾಯಕ ಪ್ರಧಾನ ವ್ಯವಸ್ಥಾಪಕ

ವಾಗೀಶ ದೀಕ್ಷಿತ್

ರೈಲ್ವೆ ಇಲಾಖೆಯ ಮಳಿಗೆಗೆ ಭೇಟಿ ನೀಡಿ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಪರಿಶೀಲಿಸಿದರು. ನೈಋತ್ಯ ವಲಯದ ಜಿಎಂ ಎ.ಕೆ. ಸಿಂಗ್ ಹಾಗೂ ಇತರ ಅಧಿಕಾರಿಗಳಿದ್ದರು.

5 ಸಾವಿರ ಕೋಟಿ ರೂ. ವ್ಯವಹಾರ

ಇಲೆಕ್ಟ್ರಿಕಲ್ ಬಿಡಿಭಾಗಗಳ ತಯಾರಿಕೆ ಕಂಪನಿ ನಮ್ಮದು. 30 ವರ್ಷದಿಂದ ಚೀನಾದಿಂದಲೇ ಉತ್ಪಾದಿಸಿ ಮಧ್ಯಪೂರ್ವ ರಾಷ್ಟ್ರ ಹಾಗೂ ಯುರೋಪ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. 5 ಸಾವಿರ ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಉತ್ತರ ಕರ್ನಾಟಕದಲ್ಲೂ ಇಂಥ ಘಟಕ ಆರಂಭಿಸಿ ಇಲ್ಲಿಂದಲೇ ಇಒಯು(ಎಕ್ಸ್​ಪೋರ್ಟ್ ಒರಿಯೆಂಟೆಡ್ ಯೂನಿಟ್) ಮಾಡಲು ನಿರ್ಧರಿಸಿದ್ದೇವೆ. 100 ಕೋಟಿ ರೂ. ಹೂಡಿಕೆ ಮಾಡಿದ್ದು, 100 ಜನರಿಗೆ ಉದ್ಯೋಗ ಕೊಡುವ ಉದ್ದೇಶವಿದೆ. ಇಲ್ಲಿನ ಯುವಕರು ಶ್ರಮಜೀವಿಗಳು, ಕಾಯಕಯೋಗಿಗಳು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಅದಕ್ಕಾಗಿ ನಮ್ಮ ಯುವಕರ ಶ್ರಮ ವಿಶ್ವಕ್ಕೆ ಪರಿಚಯಿಸುವ ಉದ್ದೇಶವಿದೆ. 2021ರಲ್ಲಿ ಕೈಗಾರಿಕೆ ಆರಂಭಿಸಲಾಗುವುದು. ಇಂಥ ಸಮಾವೇಶಗಳು ನಡೆಯುವುದರಿಂದ ಉದ್ಯಮಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.| ರಘು ಮಹಾಜನಕಟ್ಟಿ, ಮೆನ್​ಗಾಂಗ್(ಎಚ್​ಕೆ) ಇಂಟರ್​ನ್ಯಾಷನಲ್ ಕಂ.ಲಿ.ನ ಬಿಜಿನೆಸ್ ಡೆವಲಪ್​ವೆುಂಟ್-ಭಾರತ ಮಾರುಕಟ್ಟೆಯ ನಿರ್ದೇಶಕ

ಉದ್ಯಮ ಆರಂಭಿಸಲು ಉತ್ತಮ ವೇದಿಕೆ ಜಾಗತಿಕ ಕೈಗಾರಿಕಾ ಕ್ಷೇತ್ರದ ದಿಗ್ಗಜರು ಈ ಸಮಾವೇಶಕ್ಕೆ ಆಗಮಿಸಿದ್ದು, ಈ ಭಾಗದಲ್ಲಿ ಉದ್ಯಮ ಆರಂಭಿಸಲು ಇದು ಉತ್ತಮ ವೇದಿಕೆಯಾಗಿದೆ. ಈ ಸಮಾವೇಶದ ಮೂಲಕ ನಾವು ಈ ಭಾಗದಲ್ಲಿ 3000 ಕೋಟಿ ರೂ. ಹೂಡಿಕೆ ಮಾಡಲು ಒಡಂಬಡಿಕೆ ಮಾಡಿಕೊಂಡಿದ್ದು, ನೂರಾರು ಜನರಿಗೆ ಉದ್ಯೋಗ ದೊರೆಯಲಿದೆ. | ವಿನೀತ ಚೋಪ್ರಾ, ಸಿಇಒ, ನ್ಯಾಟ್​ಕ್ಯಾಪ್ ಪವರ್, ಕೆನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net