

ಕೂಡ್ಲಿಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರದಿಂದ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಈವರೆಗೆ ತಾಲೂಕಿನ 981 ರೈತರು ನೋಂದಣಿ ಮಾಡಿಕೊಂಡಿದ್ದಾರೆ.
ಪ್ರತಿ ದಿನ 25 ಟನ್ ರಾಗಿ ಖರೀದಿ ಮಾಡಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ ರಾಗಿ ಬೆಳೆದ ರೈತರು ಕೃಷಿ ಇಲಾಖೆಯ ್ರೂಟ್ಸ್ ಐಡಿಯೊಂದಿಗೆ ಖುದ್ದಾಗಿ ಬಂದು ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಬೇಕು.
ಗುಣಮಟ್ಟದ ರಾಗಿಯನ್ನು ಮಾತ್ರ ಖರೀದಿ ಮಾಡಲಾಗುತ್ತದೆ ಎಂದು ಖರೀದಿ ಕೇಂದ್ರದ ಉಸ್ತುವಾರಿ ಜಿ. ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ. ಖರೀದಿ ಕೇಂದ್ರದಿಂದ ಕರೆ ಬಂದ ನಂತರವೇ ರಾಗಿ ತರಬೇಕು ಎಂದು ಕೂಡ್ಲಿಗಿ ಎಪಿಎಂಸಿ ಕಾರ್ಯದರ್ಶಿ ಬಸವರಾಜ ತಿಳಿಸಿದರು.