ಎಪಿಎಂಸಿಗೆ ಆಡಳಿತಾಧಿಕಾರಿ ನೇಮಕ

Published on

ಬಳ್ಳಾರಿ : ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸಮಿತಿಗೆ ಆಡಳಿತಾಧಿಕಾರಿಯನ್ನಾಗಿ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ ಮಿಶ್ರಾ ನೇಮಿಸಿ ರಾಜ್ಯ ಕೃಷಿ ಮಾರಾಟ ಇಲಾಖೆಯ ನಿರ್ದೇಶಕ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ. ಇಲ್ಲಿಯವರಗೆ ಎಪಿಎಂಸಿ ಅಧ್ಯಕ್ಷರಾಗಿ ಕಟ್ಟೆಮನೆ ನಾಗೇಂದ್ರ ಮತ್ತು 14 ಜನ ನಿರ್ದೇಶಕರನ್ನು ಸರ್ಕಾರದಿಂದ ನಾಮ ನಿರ್ದೇಶನಗೊಂಡಿದ್ದರು. ಈ ಹಿಂದಿನ ಸರ್ಕಾರ ಎರಡು ವರ್ಷಗಳವರೆಗೆ ನೇಮಕ ಮಾಡಿದ್ದರಿಂದ ಅವಧಿ ಪೂರ್ಣಗೊಂಡಿದೆ. ಸರ್ಕಾರ ಮರು ನೇಮಕ ಮಾಡುವವರೆಗೆ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಕಾರ್ಯ ನಿರ್ವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net