ಎಪಿಎಂಸಿ ವ್ಯಾಪಾರಿ ಬಳಿಕ ಮಹಿಳೆ ಹಣವೂ ಗಾಯಾಬ್, ಭೀಮಾತೀರದಲ್ಲಿ ಏನಿದು ಸರಣಿ ಲೂಟಿ?

1660731557120
Published on

ವಿಜಯಪುರ: ಭೀಮಾತೀರ ಖ್ಯಾತಿಯ ಚಡಚಣ ಪಟ್ಟಣದಲ್ಲಿ ಎಪಿಎಂಸಿ ವ್ಯಾಪಾರಿಯೊಬ್ಬನ 18 ಲಕ್ಷ ರೂ.ಲೂಟಿ ಬಳಿಕ ಸಂತೆಗೆ ಬಂದ ಅಮಾಯಕ ಹೆಣ್ಣುಮಗಳ ಹಣವೂ ಲೂಟಿಗೈಯ್ಯಲಾಗಿದೆ.

ಮಹಾರಾಷ್ಟ್ರದ ಸಿದ್ಧಾಪುರ ಗ್ರಾಮದ ಸರೋಜಿನಿ ಎಂಬ ಮಹಿಳೆಯ 40 ಸಾವಿರ ರೂಪಾಯಿ ಲೂಟಿಯಾಗಿದೆ. ಚಿನ್ನದ ಅಂಗಡಿಗೆ ಹೋಗಿ ಕಿವಿಯೋಲೆಗಾಗಿ 2400 ರೂ.ಮುಂಗಡ ಕೊಟ್ಟು, ಬಳಿಕ ಬಟ್ಟೆ ಅಂಗಡಿಗೆ ಹೋಗಿ 1000 ರೂಪಾಯಿಯ ಬಟ್ಟೆ ಖರೀದಿಸಿ ಉಳಿದ ಹಣ ಬ್ಯಾಗ್‌ನಲ್ಲಿರಿಸಿದ್ದ ಸರೋಜಿನಿಯನ್ನು ಅಂಗಡಿ ಹೊರಗಡೆಯೇ ಕೆಲವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಳ್ಳಾಡಿದ್ದಾರೆ. ಈ ವೇಳೆ ಬ್ಯಾಗ್‌ನಲ್ಲಿದ್ದ ಹಣ ಗಾಯಾಬ್ ಆಗಿದೆ. ಹಣ ಕಳೆದುಕೊಂಡ ಸರೋಜಿನಿ ಬೀದಿಯಲ್ಲಿ ಅಳುತ್ತಾ ತಿರುಗಾಡಿದ್ದಾಳೆ. ಬಳಿಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾಳೆ.

ಇದಕ್ಕೂ ಮುನ್ನ ಲೋಣಿ ಬಿಕೆ ಗ್ರಾಮದ ಸಿದ್ದರಾಮ ಕಾಪ್ಸೆ ಎಂಬುವರ 18 ಲಕ್ಷ ರೂಪಾಯಿಯನ್ನು ಯಾಮಾರಿಸಿ ಎಗರಿಸಲಾಗಿತ್ತು. ಅದರ ಬೆನ್ನಲ್ಲೇ ಸರೋಜಿನಿಯ ಹಣ ಕಳುವಾಗಿದ್ದು ಚಡಚಣ ಪಟ್ಟಣದ ನಿವಾಸಿಗಳು ಆತಂಕಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net