

ವಿಜಯವಾಣಿ ಸುದ್ದಿಜಾಲ ಧಾರವಾಡ
ಇಲ್ಲಿನ ಎಪಿಎಂಸಿ ಮÁರುಕಟ್ಟೆ ಪ್ರಾಂಗಣದಲ್ಲಿ ಹಣ್ಣು- ತರಕಾರಿ ಮÁರಾಟಗಾರರಿಗೆ ಲೀಸ್ ಕಂ ಸೇಲ್ ಆಧಾರದಲ್ಲಿ ಹಂಚಿಕೆ ಮÁಡಲು ಉದ್ದೇಶಿಸಿದ್ದ ೬೪ ನಿವೇಶನಗಳ ಹಂಚಿಕೆಯಲ್ಲಿ ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ನೇತೃತ್ವದಲ್ಲಿ ಗುರುವಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಯಿತು.
ಎಪಿಎಂಸಿ ಕಾರ್ಯದರ್ಶಿವೀರಭದ್ರಯ್ಯ ಹಿರೇಮಠ, ಸಹ ಕಾರ್ಯದರ್ಶಿ ಅಜಯ ಹಳೇಮನಿ ಹಾಗೂ ಮÁಜಿ ಆಡಳಿತಾಽಕಾರಿ ಪ್ರಭಾಕರ ಅಂಗಡಿ ಅವರು ನಿಯಮಗಳನ್ನು ಗಾಳಿಗೆ ತೂರಿ ಅನರ್ಹರಿಗೆ ನಿವೇಶನ ಹಂಚಿಕೆ ಮÁಡುವ ಮೂಲಕ ಅರ್ಹ ಅರ್ಜಿದಾರರಿಗೆ ಅನ್ಯಾಯ ಎಸಗಿದ್ದು, ಅವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆ ಬಸವರಾಜ ಕೊರವರ ಮಾತನಾಡಿ, ಜ್ಯೇಷ್ಠತಾ ಪಟ್ಟಿಯಲ್ಲಿನ ಹೆಸರನ್ನು ಬಿಟ್ಟು ರಾಜಕೀಯ ವ್ಯಕ್ತಿಗಳ ಪ್ರಭಾವಕ್ಕೆ ಮಣಿದು ಅನರ್ಹರನ್ನು ಆಯ್ಕೆ ಪಟ್ಟಿಗೆ ಸೇರಿಸಲಾಗಿದೆ. ಅಲ್ಲದೆ, ೨ ವರ್ಷಗಳಿಂದ ವಿನಾಕಾರಣ ನಿವೇಶನ ಹಂಚಿಕೆಯನ್ನು ವಿಳಂಬ ಮÁಡಲಾಗಿದಎ ಎಂದರು.