

ಗಂಗಾಧರ್ ಬೈರಾಪಟ್ಟಣ ರಾಮನಗರ
ಬೆಂಗಳೂರು&ಮೈಸೂರು ನಡುವೆ ಸಂಚರಿಸುವ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗುತ್ತಿರುವ ಎನ್ಎಚ್ &275ರ ವೈಶಿಷ್ಟ$್ಯತೆಗೆ ಮತ್ತೊಂದು ಗರಿ ಸೇರ್ಪಡೆ ಆಗಲಿದೆ. ತುರ್ತು ಸಂದರ್ಭ ಹಾಗೂ ಗಣ್ಯರ ಬಳಕೆಗೆ ಅನುಕೂಲವಾಗುವಂತೆ ಹೆದ್ದಾರಿಯಲ್ಲಿ ಹೆಲಿಪ್ಯಾಡ್ ನಿರ್ಮಾಣವಾಗಲಿದ್ದು, ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ.
ಬೆಂಗಳೂರು ಹೊರವಲಯದ ನೈಸ್ ಜಂನ್ ಬಳಿಯ 18ನೇ ಕಿ.ಮೀ. ಮೈಲಿಗಲ್ಲಿನ ಬಳಿ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂನ್ನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 118 ಕಿ.ಮೀ ಉದ್ದಕ್ಕೆ ಹತ್ತು ಪಥಗಳ ರಸ್ತೆ ನಿರ್ಮಾಣ ಆಗುತ್ತಿದೆ. ಇದರ ನಡುವೆ ತುರ್ತು ಬಳಕೆಗೆ ಅನುಕೂಲವಾಗುವಂತೆ ಹೆಲಿಪ್ಯಾಡ್ ನಿರ್ಮಾಣಕ್ಕೆ ಬೇಡಿಕೆ ಇಡಲಾಗಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ ಕೋರಿಕೆ ಇಟ್ಟ ಮೂರು ಹೆಲಿಪ್ಯಾಡ್ನಲ್ಲಿ ಒಂದಕ್ಕೆ ಅನುಮತಿ ನೀಡಿದ್ದು, ಇದು ರಾಮನಗರದ ಬಳಿಯೇ ನಿರ್ಮಾಣವಾಗಲಿದೆ. ಇದರೊಂದಿಗೆ ಹೆದ್ದಾರಿ ವೈಶಿಷ್ಟ$್ಯ ಮತ್ತಷ್ಟು ಹೆಚ್ಚಲಿದೆ ಎಂದು ಮೈಸೂರು&ಕೊಡಗು ಲೋಕಸಭೆ ಕ್ಷೇತ್ರದ ಸಂಸದ ಪ್ರತಾಪ ಸಿಂಹ ತಿಳಿಸಿದರು.
ದಸರೆಗೆ ಹೆದ್ದಾರಿ ಮುಕ್ತ: ಮೂರು ವರ್ಷಗಳ ಹಿಂದೆ ಆರಂಭಗೊಂಡ ಬೆಂಗಳೂರು ಮತ್ತು ಮೈಸೂರು ನಡುವಿನ ರಾಷ್ಟ್ರೀಯ ಹೆದ್ದಾರಿ 275ರ 10 ಲೇನ್ಗಳ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಮೈಸೂರು ದಸರಾ ವೇಳೆಗೆ ಪ್ರಯಾಣಿಕರ ಬಳಕೆಗೆ ಸಂಪೂರ್ಣ ಮುಕ್ತವಾಗಲಿದೆ. ಈ ವೇಳೆ ಹೆದ್ದಾರಿ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವುದಿಲ್ಲವಾದರೂ, ಪ್ರಯಾಣಿಕರ ಬಳಕೆಗೆ ಅಡತಡೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ದಸರಾ ವೇಳೆಗೆ ಎರಡೂ ಹಂತದ ಹೆದ್ದಾರಿಯನ್ನು ಪ್ರಯಾಣಿಕರ ಬಳಕೆಗೆ ಮುಕ್ತ ಮಾಡಿ, ಉಳಿಯುವ ಸಣ್ಣ&ಪುಟ್ಟ ಕಾಮಗಾರಿಗಳನ್ನು ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲಾಗುತ್ತದೆ ಎನ್ನುತ್ತಾರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.
16 ಕಡೆ ಎಂಟ್ರಿ ಎಕ್ಸಿಟ್ಗಳ ನಿರ್ಮಾಣ: ಬೆಂಗಳೂರಿನಿಂದ ಮೈಸೂರಿನವರೆಗೂ ಎಕ್ಸ್ಪ್ರೆಸ್ ವೇನಲ್ಲಿ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಸೇರಿ ಎಲ್ಲಿಯೂ ಎಂಟ್ರಿ, ಎಕ್ಸಿಟ್ಗಳಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಬೆಂಗಳೂರಿನಿಂದ ನೇರವಾಗಿ ಮೈಸೂರಿನಲ್ಲೇ ಇಳಿಯಬೇಕು. ಈ ನಡುವಿನ ನಗರಗಳಿಂದ ಬೈಪಾಸ್ ಮೂಲಕವೇ ಬೆಂಗಳೂರು ಇಲ್ಲವೇ ಮೈಸೂರು ತಲುಪಬೇಕು. ಇದರೊಂದಿಗೆ ಕೆಲವೆಡೆ ೆನ್ಸಿಂಗ್ ಅಳವಡಿಸಲು ಸ್ಥಳಿಯರು ವಿರೋಧ ವ್ಯಕ್ತಪಡಿಸಿದ್ದರು. ಈ ನಡುವೆ ಹೆದ್ದಾರಿಯಲ್ಲಿ ಪೂರ್ಣವಾಗಿ 16 ಕಡೆಗಳಲ್ಲಿ ಎಂಟ್ರಿ, ಎಕ್ಸಿಟ್ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಎರಡೂ ಮಹಾನಗರಗಳ ನಡುವಿನ ನಗರಗಳ ಜನತೆ ನಿರಾಳರಾಗುವಂತೆ ಮಾಡಿದೆ. ಇದರ ಜತೆಗೆ ಒಟ್ಟು 90 ಕಡೆಗಳಲ್ಲಿಯೂ ಸಹ ನಿಲ್ದಾಣಗಳ ನಿರ್ಮಾಣ ಕಾರ್ಯವೂ ನಡೆಯಲಿದೆ.
ಏನಿದು ಕಾಮಗಾರಿ?: ಈ ಕಾಮಗಾರಿ ಮುಗಿದಲ್ಲಿ ಬೆಂಗಳೂರು&ಮೈಸೂರು ನಡುವಿನ ಪ್ರಯಾಣ ಈಗಿರುವ 3 ಗಂಟೆಗೆ ಬದಲಾಗಿ 90 ನಿಮಿಷಕ್ಕೆ ಇಳಿಯಲಿದೆ. ಮಧ್ಯಪ್ರದೇಶ ಮೂಲದ ದಿಲೀಪ್ ಬಿಲ್ಡಾ$್ಕನ್ ಕಂಪನಿ ರಸ್ತೆ ಕಾಮಗಾರಿಯ ಗುತ್ತಿಗೆ ಪಡೆದಿದೆ. 2019ರಿಂದ ಕಂಪನಿಯು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದೆ. ಬೆಂಗಳೂರು&ಮೈಸೂರು ಹೆದ್ದಾರಿ ಹಳೆಯ ನಾಲ್ಕು ಪಥದ ರಸ್ತೆ ಸುಮಾರು 25ರಿಂದ 30ಮೀಟರ್ ಅಗಲ ಇದ್ದು, ಇದನ್ನು 60 ಮೀಟರ್ ಹಾಗೂ ಎಲಿವೇಟೆಡ್ ಕಾರಿಡಾರ್ ಬಳಿ 45 ಮೀಟರ್ಗೆ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರು&ಮೈಸೂರು ನಡುವೆ ಸದ್ಯ 135 ಕಿಲೋಮೀಟರ್ ಅಂತರವಿದೆ. ಇದರಲ್ಲಿ ಬೆಂಗಳೂರು ಹೊರವಲಯದ ನೈಸ್ ಜಂನ್ ಬಳಿಯ 18ನೇ ಕಿ.ಮೀ. ಮೈಲಿಗಲ್ಲಿನ ಬಳಿ ಪಂಚಮುಖಿ ದೇವಸ್ಥಾನದಿಂದ ರಸ್ತೆ ವಿಸ್ತರಣೆ ಆರಂಭಗೊಂಡು ಮೈಸೂರಿನ ಕೊಲಂಬಿಯಾ ಏಷ್ಯಾ ಜಂನ್ನಲ್ಲಿ ಮುಕ್ತಾಯಗೊಳ್ಳಲಿದೆ. ಒಟ್ಟು 118 ಕಿ.ಮೀ ಉದ್ದಕ್ಕೆ ಹತ್ತು ಪಥಗಳ ರಸ್ತೆ ನಿರ್ಮಾಣ ಆಗುತ್ತಿದೆ. 6 ಎಕ್ಸ್ಪ್ರೆಸ್ ಲೇನ್, 4 ಸರ್ವಿಸ್ ಲೇನ್ ನಿರ್ಮಾಣ ಹಂತದಲ್ಲಿದೆ. 8 ಕಿ.ಮೀ ಉದ್ದ ಎಲಿವೇಟೆಡ್ ಕಾರಿಡಾರ್, 9 ಪ್ರಮುಖ ಸೇತುವೆಗಳು, 42 ಕಿರು ಸೇತುವೆಗಳು, 64 ಅಂಡರ್ ಪಾಸ್, 11 ಓವರ್ ಪಾಸ್ಗಳು, 4 ರೋಡ್ ಓವರ್ ಬ್ರಿಡ್ಜ್, 5 ಬೈಪಾಸ್ ಬರಲಿವೆ.
ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಹಾಗೂ ಗಣ್ಯರ ಓಡಾಟಕ್ಕೆ ಅನುಕೂಲವಾಗುವಂತೆ ಹೆದ್ದಾರಿಯಲ್ಲಿ ಹೆಲಿ ಪ್ಯಾಡ್ಗಳ ನಿರ್ಮಾಣಕ್ಕೆ ಕೇಂದ್ರಕ್ಕೆ ಮನವಿ ಮಾಡಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದ್ದು, ಒಂದು ಹೆಲಿಪ್ಯಾಡ್ ರಾಮನಗರ ಬಳಿಯೇ ನಿರ್ಮಾಣವಾಗಲಿದೆ. ಪ್ರತಾಪ್ಸಿಂಹ, ಸಂಸದ, ಮೈಸೂರು&ಕೊಡಗು ಕ್ಷೇತ್ರ ಸಣ್ಣ&ಪುಟ್ಟ ಕೆಲಸಗಳ ಬಾಕಿ ಹೊರತಾಗಿ ದಸರಾ ವೇಳೆಗೆ ಹೆದ್ದಾರಿ ವಾಹನ ಸಂಚಾರಕ್ಕೆ ಮುಕ್ತವಾಗುವ ವಿಶ್ವಾಸವಿದೆ. ಆದರೆ ಡಿಸೆಂಬರ್ ಅಂತ್ಯಕ್ಕೆ ಪೂರ್ಣವಾಗಿ ಲಭ್ಯವಾಗಲಿದೆ.ಈಗಾಗಲೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ ನಡೆಯುತ್ತಿದೆ. ಶ್ರೀಧರ್, ಪಿಡಿ