ಎನ್‌ಸಿಸಿ ಅಕಾಡೆಮಿ ನಿರ್ಮಾಣಕ್ಕೆ ಅನುದಾನ ನೀಡಿ

mysore
Published on

ಮೈಸೂರು: ಆಲನಹಳ್ಳಿ ಸಮೀಪದ 3.5 ಎಕರೆ ಸ್ಥಳದಲ್ಲಿ ಎನ್‌ಸಿಸಿ ಅಕಾಡೆಮಿ ನಿರ್ಮಿಸಲು ರಾಜ್ಯ ಸರ್ಕಾರ 25 ಕೋಟಿ ರೂ. ಅನುದಾನ ನೀಡಬೇಕು ಎಂದು ಲೆಫ್ಟಿನೆಂಟ್ ಕರ್ನಲ್ ರೋಹಿತ್ ಠಾಕೂರ್ ಆಗ್ರಹಿಸಿದರು.

ಮೈಸೂರು ಎನ್‌ಸಿಸಿ 4 ಕೆಎಆರ್-ಏರ್ ಸ್ಕ್ವಾಡ್ರನ್ ಅಲುಮ್ನಿ ಸಂಘದ ವತಿಯಿಂದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಆಯೋಜಿಸಿದ್ದ 76ನೇ ಎನ್‌ಸಿಸಿ ದಿನಾಚರಣೆ ಕಾರ್ಯಕ್ರಮದಲ್ಲಿ ವಾತನಾಡಿದರು.

ಎನ್‌ಸಿಸಿ 500 ಕೆಡೆಟ್‌ಗಳ ತರಬೇತಿಗೆ ಅಗತ್ಯ ಸೌಲಭ್ಯವನ್ನು ಹೊಂದಿರುವಂತಹ ಅಕಾಡೆಮಿ ರೂಪಿಸಬೇಕಿದೆ. ಡ್ರೋನ್ ತರಬೇತಿಯೂ ರಕ್ಷಣಾ ವಿಭಾಗದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಮೈಸೂರು ಭಾಗಕ್ಕೆ ಡ್ರೋನ್ ಸ್ಕೂಲ್ ನಿರ್ವಾಣಕ್ಕೆ ಅವಕಾಶ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅಕಾಡೆಮಿ ನಿರ್ಮಾಣವಾದರೆ ರಾಜ್ಯಕ್ಕೆ ಮತ್ತು ಮೈಸೂರಿಗೆ ಹಿರಿಮೆ ಬರಲಿದೆ ಎಂದರು.

ಈ ಎಲ್ಲ ವ್ಯವಸ್ಥೆ ಜಾರಿಗೆ ರಾಜಕೀಂು ಇಚ್ಛಾಸಕ್ತಿ ಅಗತ್ಯವಾಗಿದೆ. ಅಕಾಡೆಮಿಗೆ ಮೂಲಸೌಲಭ್ಯ ಕಾರ್ಯಗತಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿಯಾಗಿ ಸಮಾಲೋಚಿಸಲಾಗಿದೆ. ನಮ್ಮ ಸಂಘದವರೂ ಈ ಬಗ್ಗೆ ರಾಜಕೀಯ ಒತ್ತಡ ಹೇರಬೇಕಿದೆ ಎಂದರು.

ಮೈಸೂರಿನ ಮೊದಲ ಪೈಲಟ್ ಪುಣ್ಯ ನಂಜಪ್ಪ ಮಾತನಾಡಿ, ನನಗೆ ಫೈಟರ್ ಪೈಲಟ್ ಏನು ಎಂಬುದರ ಬಗ್ಗೆ ಗೊತ್ತಿರಲಿಲ್ಲ. ಒಮ್ಮೆ ತಂದೆಯೊಟ್ಟಿಗೆ ಬೆಂಗಳೂರಿನ ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡಿದಾಗ ಅಲ್ಲಿ ಫೈಟರ್ ಪೈಲಟ್ ನೋಡಿದ್ದೆ. ಆಗಲೇ ಪೈಲಟ್ ಆಗಬೇಕು ಎಂಬ ಕನಸು ಕಂಡಿದ್ದೆ. ನಂತರ ಎನ್‌ಸಿಸಿಯಲ್ಲಿ ಸೇರ್ಪಡೆಗೊಂಡು ಆ ಮೂಲಕ ಫೈಟರ್ ಪೈಲಟ್, ಇಂಜಿನಿಯರ್ ಆದೆ ಎಂದು ಸ್ಮರಿಸಿದರು.

ಜೀವನದಲ್ಲಿ ಪ್ರತಿಯೊಂದು ಸಣ್ಣ ವಿಷಯವೂ ಪ್ರಮುಖವಾಗಿರುತ್ತವೆ. ಎಲ್ಲದರ ಬಗ್ಗೆ ಗಮನವಹಿಸಬೇಕು, ಅದು ಗುರಿ ತಲುಪಲು ನೆರವಾಗಲಿದೆ. ನಾನು ಕನಸು ಕಂಡಾಗ ಯಾರು ಈ ರೀತಿ ಸಲಹೆ ಕೊಡಲಿಲ್ಲ. ಕಷ್ಟಪಟ್ಟು ಆಗಿನ ಕಾಲದ ಇಂಟರ್‌ನೆಟ್ ವೇಗ ಕಡಿಮೆ ಇದ್ದಾಗ ಗೂಗಲ್ ಮೂಲಕ ಮಾಹಿತಿ ಪಡೆದುಕೊಂಡಿದ್ದೆ. ಈಗಿನ ಯುವ ಜನರು ಎಲ್ಲವನ್ನೂ ಆಲಿಸಿ ಜೀವನದಲ್ಲಿ ಮುನ್ನುಗ್ಗಿ ಸಾಗಬೇಕು ಎಂದು ಕಿವಿಮಾತು ಹೇಳಿದರು.

ವಿಂಗ್ ಕವಾಂಡರ್ ಆಶೀಸ್, ಗ್ರೂಪ್ ಕ್ಯಾಪ್ಟನ್ ಅಭಿನವ್ ಚತುರ್ವೇದಿ, ಏರೋ ವಾಡಲಿಂಗ್ ನಿವೃತ್ತ ಬೋಧಕ ನಾಗರಾಜು, ಸಂಶೋಧಕ ಸೋಮೇಂದ್ರ ಸಿಂಗ್, ಲೆಫ್ಟಿನೆಂಟ್ ಕರ್ನಲ್ ಪ್ರಭಾಕರ್ ಇದ್ದರು.

ಎನ್‌ಸಿಸಿ ದಿನಾಚರಣೆಯ ಅಂಗವಾಗಿ ಬೈಕ್ ರ‌್ಯಾಲಿ ನಡೆಯಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಇದಕ್ಕೆ ನಗರ ಸಂಚಾರ ವಿಭಾಗದ ಸಹಾಯಕ ಆಯುಕ್ತ ಪರಮೇಶ್ವರಪ್ಪ ಚಾಲನೆ ನೀಡಿದರು.

ನಂತರ 10ನೇ ಜಯಚಾಮರಾಜೇಂದ್ರ ಒಡೆಯರ್ ವೃತ್ತದ ಮೂಲಕ ಸಾಗಿ ಹಾರ್ಡಿಂಜ್ ವೃತ್ತ, ಸಂಸ್ಕೃತ ಪಾಠಶಾಲೆ ವೃತ್ತ, ಚಾಮರಾಜ ಜೋಡಿ ರಸ್ತೆ ಮೂಲಕ ರಾಮಸ್ವಾಮಿ ವೃತ್ತ, ಮುಡಾ ಕಚೇರಿ ಮುಂಭಾಗ ಸಾಗಿ ಫೀಲ್ಡ್ ವಾರ್ಷಲ್ ಕಾರ್ಯಪ್ಪ ಪುತ್ಥಳಿಗೆ ನಮನ ಸಲ್ಲಿಸಲಾಯಿತು.

ವಾಜಿ ಕೆಡೆಟ್‌ಗಳ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನಿಲ್ ಥಾಮಸ್, ಉಪಾಧ್ಯಕ್ಷ ಡಾ.ವಾದವ ದೇಶ್‌ಪಾಂಡೆ, ಸಂಸ್ಥಾಪಕಿ ಉವಾ ವೆಂಕಟೇಶ್, ಖಜಾಂಚಿ ಅನಿತಾ ಬಂಸಿಲಾಲ್, ಜಂಟಿ ಖಜಾಂಚಿ ಶಂಕರ ಧನಗೌಡ, ಲಕ್ಷ್ಮೀ ವಲ್ಲಭ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net