

ನರಗುಂದ: ತಾಲೂಕಿನ ಜಗಾಪೂರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗ್ರೂಫ್ ಮಟ್ಟದ ಪ್ರೌಢ ಶಾಲೆಗಳ ವಿವಿಧ ಕ್ರೀಡಾಕೂಟದಲ್ಲಿ ಕಣಕೀಕೊಪ್ಪ ಎನ್‌ಸಿಕೆ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ, ಥ್ರೋಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ವೈಯಕ್ತಿಕ ಸ್ಪರ್ಧೆಗಳಾದ
ಭರ್ಚಿ ಎಸೆತದಲ್ಲಿ ಪ್ರಥಮ, ತ್ರಿವಿಧ ಜಿಗಿತದಲ್ಲಿ ಪ್ರಥಮ, 3 ಸಾವಿರ ಮೀ. ಓಟದಲ್ಲಿ ದ್ವಿತೀಯ, ಎತ್ತರ ಜಿಗಿತದಲ್ಲಿ ದ್ವಿತೀಯ, ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಬಾಲಕಿಯರ ವಿಭಾಗದ ಕಬಡ್ಡಿಯಲ್ಲಿ ಪ್ರಥಮ, ಥ್ರೋಬಾಲ್ ಪ್ರಥಮ, ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಗುಂಡು ಎಸೆತ, ನಡಿಗೆ ಸ್ಪರ್ಧೆಯಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನವನ್ನು ಶಾಲೆಯ ವಿದ್ಯಾರ್ಥಿಗಳು ಪಡೆದಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಕೆ.ಬಿ. ಕುರಹಟ್ಟಿ ತಾಲೂಕಾಡಳಿತದ ಪರವಾಗಿ ಗುರುವಾರ ಸನ್ಮಾನಿಸಿದರು. ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಗಿ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎನ್.ಆರ್. ನಿಡಗುಂದಿ, ತಂಡದ ವ್ಯವಸ್ಥಾಪಕ ಎಸ್.ಎಲ್. ಮರಿಗೌಡ್ರ, ಮುಖ್ಯೋಪಾಧ್ಯಾಯ ಐ.ಎಂ. ಹುರಕಡ್ಲಿ, ಎಸ್.ಪಿ. ಹಿರೇಮನಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎಂ.ಎಂ. ಕಲಹಾಳ, ಜಗಾಪೂರ ಸರ್ಕಾರಿ ಪ್ರೌಢ ಶಾಲೆ ಮುಖ್ಯೋಪಾಧ್ಯಾಯಿನಿ ಎಸ್.ವಿ. ಬದಾಮಿ, ಎಸ್‌ಡಿಎಂಸಿ ಅಧ್ಯಕ್ಷ ವೆಂಕರಡ್ಡಿ ಕಗಧಾಳ, ಶಿಕ್ಷಕ ಎಫ್.ಬಿ. ಧರಿಯಣ್ಣವರ ಇದ್ದರು.