ಎನ್ನೆಸ್ಸೆಸ್‌ದಿಂದ ಸೇವಾ ಮನೋಭಾವ ಹೆಚ್ಚಳ

Untitled design (4)
ಸಿಂಧನೂರು ತಾಲೂಕಿನ ಆರ್.ಹೆಚ್.ನಂ.1 ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಎನ್ನೆಸ್ಸೆಸ್ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಮಹಿಳಾ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಆರ್.ಸಿ.ಪಾಟೀಲ್ ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಶಿವರಾಜ, ಗ್ರಾಪಂ ಅಧ್ಯಕ್ಷ ರಹಮತ್‌ಪಾಷಾ, ಎನ್ನೆಸ್ಸೆಸ್ ಅಧಿಕಾರಿ ಖಾಸಿಂ ಖುರೇಷಿ ಇದ್ದರು.
Published on

ಸಿಂಧನೂರು: ಎನ್ನೆಸ್ಸೆಸ್ ಶಿಬಿರಗಳಿಂದ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡುತ್ತದೆ ಎಂದು ಪ್ರಾಚಾರ್ಯ ಡಾ.ಎಸ್.ಶಿವರಾಜ ಹೇಳಿದರು.


ತಾಲೂಕಿನ ಆರ್.ಹೆಚ್.ನಂ.1 ಗ್ರಾಮದಲ್ಲಿ ಎಕ್ಸಲೆಂಟ್ ಪದವಿ ಮಹಾವಿದ್ಯಾಲಯದಿಂದ ಶನಿವಾರ ಆಯೋಜಿಸಿದ್ದ ಎನ್ನೆಸ್ಸೆಸ್ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.


ಎನ್ನೆಸ್ಸೆಸ್ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸೇವಾ ಮನೋಭಾವ, ನಾಯಕತ್ವ ಗುಣ ಬೆಳಸುತ್ತದೆ. ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗೆ ಸ್ವಚ್ಛತೆ, ಪರಿಸರದ ಬಗ್ಗೆ ಅರಿವು ಮೂಡಿಸಬೇಕು. ಶಿಬಿರದಲ್ಲಿ ವಿವಿಧ ಯೋಜನೆಗಳನ್ನು ಹಾಕಿಕೊಂಡಲ್ಲಿ ಗ್ರಾಮೀಣ ಜನರಿಗೆ ಅನುಕೂಲವಾಗುವ ಜತೆಗೆ ಸೇವೆ ಮಾಡಿದ ತೃಪ್ತಿ ಸಿಗಲಿದೆ ಎಂದರು.


ಅಕ್ಕಮಹಾದೇವಿ ಮಹಿಳಾ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಆರ್.ಸಿ.ಪಾಟೀಲ್ ಮಾತನಾಡಿ, ಸಮಾಜ ಸೇವೆಯಲ್ಲಿ ಶಿಬಿರಾರ್ಥಿಗಳ ಪಾತ್ರ ಪ್ರಮುಖವಾಗಿದೆ. 7 ದಿನಗಳಲ್ಲಿ ಕಲಿತ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಪ್ರಾಚಾರ್ಯ ಎಂ.ವೆಂಕಟರಾವ್, ಎನ್ನೆಸ್ಸೆಸ್ ಅಧಿಕಾರಿ ಖಾಸಿಂ ಖುರೇಷಿ, ಗ್ರಾಪಂ ಅಧ್ಯಕ್ಷ ರಹಮತ್ ಪಾಷಾ, ಸದಸ್ಯರಾದ ಲಾಜಿರ್ ಸಿರೀಲ್, ಕಳೆಯರಿಸಿ, ಶಿಕ್ಷಕ ಉಮೇದ್ ಸಾಹೇಬ್, ಡಾಕಪ್ಪ, ರಾಮಕೃಷ್ಣ, ಎಚ್.ಡಿ. ಹಳ್ಳೂರ್, ಆನಂದ ಮಲ್ಲಾಪುರ, ರವಿಕುಮಾರ, ಮಂಜುನಾಥ ಪಾಟೀಲ್, ಮೆಹಬೂಬ ಪಾಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net