ಎನ್‌ಜೆ ಆಸ್ಪತ್ರೆಯಲ್ಲಿ  ಆರೋಗ್ಯ ಉಚಿತ ತಪಾಸಣೆ ಶಿಬಿರ

mysore
Published on

ಮೈಸೂರು

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಪಡುವಾರಹಳ್ಳಿಯ ವಿನಾಯಕನಗರದಲ್ಲಿರುವ ಎನ್‌ಜೆ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಆಯೋಜಿಸಿರುವ ಮೂರು ದಿನಗಳ ಆರೋಗ್ಯ ಕುರಿತು ಉಚಿತ ತಪಾಸಣೆ ಶಿಬಿರಕ್ಕೆ ಶುಕ್ರವಾರ ಚಾಲನೆ ದೊರೆಯಿತು.

ದೇಹ ದ್ರವ್ಯರಾಶಿ ಸೂಚ್ಯಂಕ (ಬಿಎಂಐ), ದೇಹದ ಕೊಬ್ಬಿನ ವಿಶ್ಲೇಷಣೆ, ಮೂಳೆ ಖನಿಜ ಸಾಂದ್ರತೆ (ಬಿಎಂಡಿ), ಹಿಮೋಗ್ಲೋಬಿನ್(ಎಚ್‌ಬಿ), ಸಾಮಾನ್ಯ ರಕ್ತದ ಸಕ್ಕರೆ ಪ್ರಮಾಣ(ಜಿಆರ್‌ಬಿಎಸ್), ದೇಹದ ಉಷ್ಣಂತೆ, ರಕ್ತದೊತ್ತಡ.. ಹೀಗೆ ವಿವಿಧ ಪರೀಕ್ಷೆ ಸಹ ಉಚಿತವಾಗಿ ಮಾಡಲಾಗುತ್ತದೆ. ಅಂತಿಮವಾಗಿ ತಜ್ಞ ವೈದ್ಯರೊಂದಿಗೆ ಸಮಾಲೋಚನೆ ಮಾಡುವ ಅವಕಾಶವನ್ನೂ ಕಲ್ಪಿಸಿಕೊಡಲಾಗುತ್ತದೆ. ಈ ಶಿಬಿರವೂ ಇನ್ನೂ ಎರಡು ದಿನ( ಮಾ.8, 9ರಂದು) ಸಹ ಇರಲಿದೆ.

ಅಧಿಕ ಅಪಾಯದ ಗರ್ಭಧಾರಣೆ ತಜ್ಞೆ, ಪೆರಿನಾಟಾಲಜಿ ಡಾ.ಡಿ.ಸಿಂಧು ಲಕ್ಷ್ಮೀ ಮಾತನಾಡಿ, ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯದ ಕುರಿತು ಅರಿವು ಮೂಡಿಸಲು ಶಿಬಿರ ಕೈಗೊಂಡಿದ್ದು, ವಿವಿಧ ಕೆಲಸದಲ್ಲಿ ತೊಡಗಿರುವ ಮಹಿಳೆಯರು, ತಮ್ಮ ಆರೋಗ್ಯದ ಕುರಿತು ಗಮನ ನೀಡದೆ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದ್ದರಿಂದ ವೈಯಕ್ತಿಕ ಆರೈಕೆ ಕುರಿತು ಜಾಗೃತಿ ಮೂಡಿಸಿ, ಅವರಿಗೆ ಉತ್ತೇಜನ ನೀಡುವುದು ಅಗತ್ಯವಾಗಿದ್ದು, ಇದಕ್ಕೆ ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.

ಮಹಿಳೆಯರಲ್ಲಿ ರಕ್ತದೊತ್ತಡ ಪ್ರಮಾಣ ಕಡಿಮೆಯಾಗಿ, ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ. ಆದರೆ, ಇದು ಅರಿವಿಗೆ ಬರುತ್ತಿಲ್ಲ. ಈ ರೀತಿ ತಪಾಸಣೆಗಳಿಂದ ಪತ್ತೆ ಮಾಡಬಹುದಾಗಿದೆ. ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಆದ್ದರಿಂದ ಈ ಶಿಬಿರದ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳಬೇಕು. ಜತೆಗೆ, ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು.

‘ವಿಜಯವಾಣಿ’ ದಿನ ಪತ್ರಿಕೆಯ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಕಾರ್ಯಕ್ರಮ ಉದ್ಘಾಟಿಸಿದರು. ಜಾಹೀರಾತು ವಿಭಾಗದ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಘಾಟ್ಕಗೆ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸುಜ್ಯೋತಿ, ಸ್ತ್ರೀರೋಗ ತಜ್ಞೆ ಡಾ.ಮಮತಾ ಚಂದ್ರಪ್ಪ, ಮೂಳೆ-ಕೀಲು ತಜ್ಞ ಡಾ.ಮನು ಪ್ರಕಾಶ್, ಜನರಲ್ ಸರ್ಜನ್ ಡಾ.ಸುದೀಶ್ ದುರ್ಗೇಶ್ ಇನ್ನಿತರರು ಇದ್ದರು. ಶಿಬಿರದ ಮಾಹಿತಿಗಾಗಿ ಮೊ.73377 01619 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net