ಎನ್​ಕೌಂಟರ್ ಕಾನೂನು ಜಾರಿಗೊಳ್ಳಲಿ

New Lad
Published on

ಹುಬ್ಬಳ್ಳಿ : ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡನೀಯ. ಇಂತಹ ದುಸ್ಕೃತ್ಯಗಳು ಮರುಕಳಿಸಬಾರದು ಎಂದರೆ ಎನ್​ಕೌಂಟರ್ ಕಾನೂನು ಜಾರಿಗೊಳಿಸಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿದ್ದಾರೆ.

ಇಲ್ಲಿನ ಕಿಮ್್ಸ ಶವಾಗಾರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಲಾಡ್, ಈ ಪ್ರಕರಣವನ್ನು ಬಿಜೆಪಿಯವರು ರಾಜಕೀಯಗೊಳಿಸಲು ಹೊರಟಿದ್ದಾರೆ ಎಂದು ದೂರಿದರು.

ಲವ್ ಜಿಹಾದ್ ಎಂದರೆ ಏನು ಎಂದು ಪ್ರಶ್ನಿಸಿದ ಸಚಿವ ಲಾಡ್, ಕೊಲೆ ಮಾಡಿದವನಿಗೆ ಶಿಕ್ಷೆ ಆಗಬೇಕು. ರಾಜಕೀಯ ಉತ್ತರ ಕೊಡುವುದು ಈಗ ಸರಿ ಅಲ್ಲ ಎಂದರು.

ಇದೊಂದು ಆಕಸ್ಮಿಕ ಘಟನೆ ಎಂಬ ಗೃಹ ಸಚಿವರ ಉತ್ತರ ಸರಿ ಇದೆ ಎಂದು ಸಮರ್ಥಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net