ಎನ್‌ಎಸ್‌ಎಸ್‌ನಿಂದ ವ್ಯಕ್ತಿತ್ವ ವಿಕಸನ

28 vikram 3
Published on

ಧಾರವಾಡ: ಯುವಕರು ದೇಶವನ್ನು ಮುನ್ನಡೆಸುವ ಪ್ರಜ್ಞಾವಂತರಾಗಿ ಬದುಕಬೇಕು. ರಾಷ್ಟ್ರೀಯ ಸೇವಾ ಯೋಜನೆ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕವಿವಿ ವಿದ್ಯಾರ್ಥಿ ಕಲ್ಯಾಣ ವಿಭಾಗದ ನಿರ್ದೇಶಕ ಪ್ರೊ. ಎಸ್.ಕೆ. ಪವಾರ ಹೇಳಿದರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ಸೆನೆಟ್ ಹಾಲ್‌ನಲ್ಲಿ ಕವಿವಿ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿವಿ ಮಟ್ಟದ ಎನ್‌ಎಸ್‌ಎಸ್ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಎಸ್. ನ್ಯಾಮತಿ, ಡಾ. ಎಸ್. ನದಾಫ್, ಡಾ. ನಾಗರಾಜ ಕೆ., ಡಾ. ಸಲೀಂ ಕೋಳೂರು, ಪರಮೇಶಪ್ಪ ಗೆಜ್ಜಿ, ಸಂಜೋತಾ ಶಿರಸಂಗಿ, ಡಾ. ಉಮೇಶ ನೀಲಪ್ಪನವರ, ಇತರರು ಇದ್ದರು.
ಪ್ರೊ. ಎಂ.ಬಿ.ದಳಪತಿ ಸ್ವಾಗತಿಸಿದರು. ಡಾ. ಶಿಲ್ಪಾ ದಾನಪ್ಪನವರ ನಿರೂಪಿಸಿದರು. ಆಸಿಫ್ ತೊರಗಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net