ಎನ್ಎಸ್ಎಸ್ ವಿಶೇಷ ವಾರ್ಷಿಕ ಶಿಬಿರ

GFGC NSS
Published on

ಯಾದಗಿರಿ:ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ವಿದ್ಯಾರ್ಥಿಗಳನ್ನು ಸಾಮಾಜಿಕ ಮತ್ತು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸುವುದರ ಮೂಲಕ ಶಿಕ್ಷಣಕ್ಕೆ ಒಂದು ಸಾಮಾಜಿಕ ಸಂವೇದನೆಯ ಆಯಾಮ ನೀಡುತ್ತದೆ ಎಂದು ಕಲಬುರಗಿ ಜಿಲ್ಲಾ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಡಾ.ವಿಶಾಲಾಕ್ಷಿ ಕರಡ್ಡಿ ತಿಳಿಸಿದರು.

ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಎನ್ಎಸ್ಎಸ್ನ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿ, ವಿದ್ಯಾಥರ್ಿಗಳು ತಮ್ಮ ಸಾಮಾಜಿಕ ಬದುಕಿನಲ್ಲಿ ಉತ್ತಮವಾದ ಬದುಕನ್ನು ಸಾಗಿಸಲು ಶಿಬಿರದಲ್ಲಿ ವಿಶಿಷ್ಟ ತರಬೇತಿ ನೀಡುತ್ತದೆ ಹಾಗೂ ಯುವಕರಲ್ಲಿ ಚಾರಿತ್ರ್ಯ, ಧೈರ್ಯ, ಆತ್ಮವಿಶ್ವಾಸ, ನಾಯಕತ್ವ, ಶಿಸ್ತು, ಸಮಯ ಪ್ರಜ್ಞೆ ಹೊಂದಾಣಿಕೆ ಬೆಳಸುತ್ತದೆ ಎಂದು ತಿಳಿಸಿದರು.

ಎನ್ಎಸ್ಎಸ್ ಅಕಾರಿ ಡಾ.ಶಂಕ್ರಮ್ಮ ಪಾಟೀಲ್, ಪ್ರಾಚಾರ್ಯ ಡಾ.ಸಂಗಪ್ಪ ರಾಂಪುರೆ, ವಿಜಯಾ ದೇಸಾಯಿ, ಭೀಮಣ್ಣ ಪಾಟೀಲ್, ಕಾಳಮ್ಮ, ಮೀನಾಕ್ಷಿ ರಾಠೋಡ, ಸುಲ್ತಾನ ಬೇಗಂ, ಗಂಗಪ್ಪ ಹೊಸಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net