

ಪರಮಾನಂದವಾಡಿ: ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಎನ್‌ಎಸ್‌ಎಸ್ ಶಿಬಿರ ಉತ್ತಮ ವೇದಿಕೆ. ವಿದ್ಯಾರ್ಥಿಗಳು ಸಮಾಜಸೇವೆ ಮಾಡಲು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮತ್ತು ಅಸಹಾಯಕರನ್ನು ಗುರುತಿಸಿ ಮುನ್ನಡೆಸುವಲ್ಲಿ ಎನ್‌ಎಸ್‌ಎಸ್ ಮಹತ್ವದ ಪಾಠ ಕಲಿಸುತ್ತದೆ ಎಂದು ಬಾವನ ಸವದತ್ತಿ ಆದರ್ಶ ಕಾಲೇಜಿನ ಪ್ರಾಚಾರ್ಯೆ ಪಿ.ಕೆ. ಮಾರಾಪುರೆ ಹೇಳಿದರು.
ಸಮೀಪದ ಸಿದ್ದಾಪುರ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜೆಪಿ ಶಿರಗೂರಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಉಪನ್ಯಾಸಕ ಎ.ಎಲ್.ಶಿರಹಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ವತಿಯಿಂದ ಜೆಪಿ ಶಿರಗೂರಕರ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಹಾಲ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿಜಯ ದಳವಾಯಿ, ಗ್ರಾ ಪಂ ಅಧಿಕಾರಿ ಎಂ.ಎಸ್. ಚೌದರಿ, ಗ್ರಾಪಂ ಅಧ್ಯಕ್ಷೆ ಬಿಬಿಜಾನ್ ಚಿಂಚಲಿ, ಗ್ರಾಪಂ ಮಾಜಿ ಅಧ್ಯಕ್ಷ ಮೌಲಾ ಚಿಂಚಲಿ, ಗ್ರಾಪಂ ಸದಸ್ಯರಾದ ಮುರಿಗೆಪ್ಪ ಬುಲಬುಲೆ, ರಾಜುಗೌಡಾ ಗುಡೋಡಗಿ, ಕಲ್ಲಪ್ಪ ಗಾಣಿಗೇರ, ರಾಮಪ್ಪ ಪಾಟೀಲ, ಪ್ರಾಚಾರ್ಯ ಆರ್.ವಿ. ಕಾಂಬಳೆ, ಡಿ.ಎಂ. ದುರದುಂಡಿ, ಡಿ.ಕೆ. ಕಾಂಬಳೆ, ಎಚ್.ಆರ್. ನಾಯಿಕ, ಎನ್.ಬಿ. ಕುಸನಾಳೆ, ಶಿವಾನಂದ ಚೌಗಲಾ, ಎನ್. ಎಸ್. ಬಂಡಗಾರ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಕೆ.ಬಿ. ಘಟಕಾಂಬಳೆ ನಿರೂಪಿಸಿದರು. ಎನ್‌ಎಸ್‌ಎಸ್ ಸಂಯೋಜಕ ಎಂ.ಎಸ್ .ಪಾಟೀಲ ವಂದಿಸಿದರು.