ಎನ್​ಎಸ್​ಎಸ್ ಅಧಿಕಾರಿಗಳಿಗೆ ತರಬೇತಿ ಇಂದಿನಿಂದ

Published on

ಹುಬ್ಬಳ್ಳಿ: ರಾಜ್ಯ ಎನ್​ಎಸ್​ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನಾ ಕೋಶ ಮತ್ತು ರಾಜ್ಯ ಕಾನೂನು ವಿಶ್ವವಿದ್ಯಾಲಯ ಜಂಟಿಯಾಗಿ ಫೆ. 11ರಿಂದ 15ರವರೆಗೆ ಎನ್​ಎಸ್​ಎಸ್ ಅಧಿಕಾರಿಗಳಿಗೆ ರಾಜ್ಯಮಟ್ಟದ ತರಬೇತಿ ಕಾರ್ಯಕ್ರಮ ಆಯೋಜಿಸಿದೆ. 11ರಂದು ಬೆಳಗ್ಗೆ 10.30ಕ್ಕೆ ನವನಗರದಲ್ಲಿರುವ ಕಾನೂನು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಮೇಲ್ಮನೆ ಅಧ್ಯಕ್ಷ ಡಿ.ಆರ್. ಪಾಟೀಲ ಉದ್ಘಾಟಿಸುವರು. ಐಐಟಿ ಧಾರವಾಡ ನಿರ್ದೇಶಕ ಪೊ›.ವೆಂಕಪ್ಪಯ್ಯ ದೇಸಾಯಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಎನ್​ಎಸ್​ಎಸ್ ಕೋಶದ ಅಧಿಕಾರಿ ಪ್ರತಾಪ ಲಿಂಗಯ್ಯ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಕಾನೂನು ವಿವಿ ಕುಲಪತಿ ಪೊ›.(ಡಾ) ಸಿ. ಬಸವರಾಜು ು ಅಧ್ಯಕ್ಷತೆ ವಹಿಸುವರು.

15ರಂದು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ವಿಶ್ವವಿದ್ಯಾಲಯದ ಕುಲಪತಿ ಪೊ›. ಸುರೇಶ ನಾಡಗೌಡರ್ ಮತ್ತು ಎನ್​ಎಸ್​ಎಸ್ ಪ್ರಾದೇಶಿಕ ನಿರ್ದೇಶಕ ಎಸ್.ಡಿ. ಕಾರ್ತಿಗೆಯನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.

ರಾಜ್ಯಾದ್ಯಂತ 26 ವಿಶ್ವವಿದ್ಯಾಲಯಗಳು, ಪದವಿ ಪೂರ್ವ, ಪದವಿ, ಡಿಪ್ಲೊಮಾ ಮತ್ತು ಕಾನೂನು ಕಾಲೇಜುಗಳನ್ನು ಒಳಗೊಂಡಿರುವ 115 ಕಾಲೇಜುಗಳ ಎನ್​ಎಸ್​ಎಸ್ ಕಾರ್ಯಕ್ರಮ ಅಧಿಕಾರಿಗಳು ತರಬೇತಿಯಲ್ಲಿ ಭಾಗವಹಿಸಲಿದ್ದಾರೆ. ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಗಾಂಧಿ ತತ್ವಶಾಸ್ತ್ರ ಮತ್ತು ಎನ್​ಎಸ್​ಎಸ್, ರಾಷ್ಟ್ರೀಯ ಏಕೀಕರಣ ಮತ್ತು ಎನ್​ಎಸ್​ಎಸ್, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ, ಸಂವಿಧಾನ ಮತ್ತು ಮಾನವ ಹಕ್ಕುಗಳು, ಯುವಜನರು ಮತ್ತು ಮಾನವ ಮೌಲ್ಯಗಳು, ಇನ್ನಿತರ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net