ಎನ್‌ಇಪಿ ರದ್ದು ನಿರ್ಧಾರ ಕೈಬಿಡಿ

24-08-Shiva-3
ಎನ್‌ಇಪಿ ರದ್ದುಗೊಳಿಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಮುಂದೆ ಎಬಿವಿಪಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ಸಹಕಾರ್ಯದರ್ಶಿ ಭೀಮೇಶ ಸಾಗರ್, ಪದಾಕಾರಿಗಳಾದ ಪಾಂಡು, ಬಸವಪ್ರಭು, ರವಿ, ಮದನ್, ನವೀನ್, ವೀರೇಶ, ಶಿವು, ಮಮತಾ, ಮೋನಿಕಾ, ಶಿಲ್ಪಾ, ಅಂಕಿತಾ, ರೂಪಾ, ಸುಷ್ಮಾ ಇದ್ದರು.
Published on

ರಾಯಚೂರು: ಎನ್‌ಇಪಿ ರದ್ದು ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಖಂಡಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಹಿಂದಿನ ಸರ್ಕಾರ 2020-21ನೇ ಸಾಲಿನಿಂದ ರಾಜ್ಯದಲ್ಲಿ ಎನ್‌ಇಪಿ ಜಾರಿಗೊಳಿಸಿದೆ. ಈಗಿನ ಸರ್ಕಾರ ಅದನ್ನು ರದ್ದುಗೊಳಿಸಲು ಹೊರಟಿರುವುದು ಖಂಡನೀಯ ಎಂದು ತಿಳಿಸಿದರು.
ರಾಜ್ಯದಲ್ಲಿನ ಕಾಂಗ್ರೆಸ್ ಶಿಕ್ಷಣ ವಿರೋಯಾಗಿದ್ದು, ರಾಜಕೀಯ ಪ್ರೇರಿತವಾಗಿ ಎನ್‌ಇಪಿ ರದ್ದುಗೊಳಿಸಲು ಮುಂದಾಗಿದೆ. ಕೇಂದ್ರ ಸರ್ಕಾರ ಶೈಕ್ಷಣಿಕ ಸುಧಾರಣೆ ನಿಟ್ಟಿನಲ್ಲಿ ಎನ್‌ಇಪಿ ಜಾರಿಗೊಳಿಸಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲಗಳಿವೆ.
ವಿದ್ಯಾರ್ಥಿಗಳನ್ನು ಕೇಂದ್ರೀಕೃತವಾಗಿರಿಸಿಕೊಂಡು ಅಧ್ಯಯನ, ಕೌಶಲ್ಯಾಧರಿತ ಶಿಕ್ಷಣ, ಪ್ರಾಂತಿಯ ಭಾಷೆಗಳ ಅಭಿವೃದ್ಧಿಗೆ ಮಾನ್ಯತೆ ಮತ್ತು ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಎನ್‌ಇಪಿ ಜಾರಿಗೊಳಿಸಲಾಗಿದೆ. ಆದರೆ ಅದಾವುದನ್ನು ಯೋಚಿಸದೆ ರಾಜ್ಯ ಸರ್ಕಾರ ಎನ್‌ಇಪಿ ರದ್ದುಗೊಳಿಸಲು ಮುಂದಾಗಿದೆ.
ಎನ್‌ಇಪಿ ರದ್ದುಗೊಳಿಸುವ ತೀರ್ಮಾನ ಕೈಗೊಳ್ಳುವ ಮುಂಚೆ ವಿವಿಗಳ ಕುಲಪತಿಗಳ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಬೇಕಾಗಿತ್ತು. ಎನ್‌ಇಪಿ ರದ್ದುಗೊಳಿಸುವುದರಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡಿದಂತಾಗಲಿದ್ದು, ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಹಕಾರ್ಯದರ್ಶಿ ಭೀಮೇಶ ಸಾಗರ್, ಪದಾಕಾರಿಗಳಾದ ಪಾಂಡು, ಬಸವಪ್ರಭು, ರವಿ, ಮದನ್, ನವೀನ್, ವೀರೇಶ, ಶಿವು, ಮಮತಾ, ಮೋನಿಕಾ, ಶಿಲ್ಪಾ, ಅಂಕಿತಾ, ರೂಪಾ, ಸುಷ್ಮಾ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net