

ಚಿತ್ರದುರ್ಗ: ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳದಿರುವುದು ದುರದೃಷ್ಟಕರ ಸಂಗತಿ ಎಂದು ಸಂಸದ ಗೋವಿಂದ ಎಂ.ಕಾರಜೋಳ ವಿಷಾದಿಸಿದರು.
ಹೊಸದಿಲ್ಲಿ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಸಂಸ್ಥೆ ಸಹಯೋಗದೊಂದಿಗೆ ಚಿತ್ರದುರ್ಗ ತಾಲೂಕು ಗುತ್ತಿನಾಡು ಕುವೆಂಪು ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್‌ಬ್ಯಾಗ್,ಸ್ವೆಟರ್ ವಿತರಣಾ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ,ದೇಶದಲ್ಲಿ ಏಕ ರೂಪ ಶಿ ಕ್ಷಣ ನೀತಿ ಜಾರಿಗೆ ತರಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2020ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಮೋದನೆ ನೀಡಿದ್ದು,ಕ ರ್ನಾಟಕದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್,ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಂಡಿಲ್ಲ.
ಈ ನೀತಿ ಪಠ್ಯಕ್ರಮ ಕಡಿತ ಮಾಡಿ ಮೂಲ ವಿಷಯಗಳ ಮೇಲೆ ಕೇಂದ್ರೀಕರಿಸುವಂತದ್ದಾಗಿದೆ. ಮಕ್ಕಳ ಮೇಲಿನ ಒತ್ತಡ ಕಡಿಮೆ ಮಾಡುವುದು ಇದರ ಮುಖ್ಯಉದ್ದೇಶವಾಗಿದೆ. ಆದರೆ ಶಿಕ್ಷಣವನ್ನು ಕೇಸರೀಕರಣ ಮಾಡಲಾಗುತ್ತಿದೆ ಎಂದು ದೂರಿ ಹಳೇ ಶಿಕ್ಷಣ ನೀತಿಯನ್ನೇ ಮುಂದುವ ರಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರಾವಧಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ವಲಯದಲ್ಲಿ ಸರ್ವ ಶಿಕ್ಷಣ ಅಭಿಯಾನದ ಮೂಲಕ ಇಡೀ ದೇಶದಲ್ಲಿ ಕ್ರಾಂತಿ ನಡೆಯಿತು. ಶಿಕ್ಷಣ ಕ್ಷೇತ್ರ ಹೊಸ ರೂಪ ಪಡೆಯಿತು. ಈಗಲೂ ಕೂಡ ಅತ್ಯುತ್ತಮ ಶಿಕ್ಷಕರಿರುವುದು ಸರ್ಕಾರಿ ಶಾಲೆ ಗಳಲ್ಲಿ,ಹೀಗಿದ್ದೂ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ ಎಂದು ಆತಂಕಕಾರಿ ಬೆಳವಣಿಗೆಯಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾ ಖಲಾತಿ ಹೆಚ್ಚಿಸಲು ಸರ್ಕಾರ ಅನೇಕ ಕಾರ‌್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದರು.
ಚಿತ್ರದುರ್ಗ ಜಿಲ್ಲೆಯಲ್ಲಿ 1ರಿಂದ 10ನೇ ತರಗತಿಯವರೆಗೆ ಅಂದಾಜು ಒಂದು ಲಕ್ಷ ವಿದ್ಯಾರ್ಥಿಗಳಿಗೆಲ್ಲರಿಗೂ ಸಮವಸ್ತ್ರ, ಸ್ಕೂಲ್‌ಬ್ಯಾಗ್,ಶೂ, ಸಾಕ್ಸ್,ಸ್ವೆಟರ್‌ನ್ನು ಉಚಿತವಾಗಿ ವಿತರಿಸಲಾಗುವುದು. ಮೊದಲ ಹಂತದಲ್ಲಿ 15 ಸಾವಿರ ಮಕ್ಕಳಿಗೆ ಪರಿಕರಗಳು ಬಂದಿವೆ. ಗುತ್ತಿನಾಡು,ಕವಾಡಿ ಗರಹಟ್ಟಿ,ಐಯುಡಿಪಿ ಲೇಔಟ್,ಮದಕರಿಪುರ ಸರ್ಕಾರಿ ಶಾಲೆಗಳಿಗೆ ವಿತರಿಸಲಾಗುವುದು. ಸಂಸ್ಥೆ ಸಂಯೋಜಕ ಡಾ.ನಾಗರಾಜ್ ಗೌರಿಬಿದನೂ ರು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ಸಾನಿಧ್ಯ ವಹಿಸಿದ್ದ ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ ಸಂಸದರ ಕಾರ‌್ಯವನ್ನು ಶ್ಲಾಘಿಸಿದ ರು. ಬಿಇಒ ಎಸ್.ನಾಗಭೂಷಣ್,ಡಿಸಿಸಿ ಬ್ಯಾಂಕ್ ನಿರ್ದೇಶಕ ಮಾಧುರಿಗಿರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ,ನಿವೃತ್ತ ಡಿವೈಎಸ್‌ಪಿ ನಾಗ ರಾಜಪ್ಪ,ಸಂಸ್ಥೆಯ ಸಹ ಸಂಯೋಜಕ ಈಶ್ವರ್,ತಾಲೂಕು ಉಪ್ಪಾರ ಸಮಾಜದ ಗೌರವಾಧ್ಯಕ್ಷ ತಿಪ್ಪೇಸ್ವಾಮಿ,ಅಜ್ಜಪ್ಪ ಮೆದೇಹಳ್ಳಿ,ಬಿಆರ್‌ಸಿ ಸಂಪ ತ್‌ಕುಮಾರ್,ಮಟ್ಟಿ ಹನುಮಂತಪ್ಪ,ವಕೀಲ ಅರುಣ್,ಕೆ.ಟಿ.ನಾಗೇಶ್,ಬಸವರಾಜ ಹಂಪಯ್ಯನಮಾಳಿಗೆ,ಎಸ್‌ಡಿಎಂಸಿ ಅಧ್ಯಕ್ಷರು,ಸದಸ್ಯರು ಮತ್ತಿತರರು ಇದ್ದರು.