

ಎನ್ ಸಿ ಪಿ ನಾಯಕನ ಸೊಸೆ ಕೊಲೆ ಪ್ರಕರಣ:
ಮಾಜಿ ಸಚಿವನ ಪುತ್ರ ಬಂಧನ
ಚಿಕ್ಕೋಡಿ:ಮಹಾರಾಷ್ಟ್ರದ ಎನ್ ಸಿಪಿ ನಾಯಕ ರಾಜೇಂದ್ರ ಹಗವಣೆ ಸೊಸೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಮಾಜಿ ಸಚಿವ ವೀರಕುಮಾರ ಪಾಟೀಲ ಪುತ್ರ ಪ್ರೀತಂ ಪಾಟೀಲ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ವೈಷ್ಣವಿ ಶಶಾಂಕ ಹಗವಣೆ(23) ಕೊಲೆಯಾದ ಯುವತಿ.ಪುಣೆ ಜಿಲ್ಲೆಯಲ್ಲಿ ಮೇ.16 ರಂದು ಅನುಮಾನಾಸ್ಪದವಾಗಿ ಸಾವಿಗಿಡಾಗಿದ್ದ ವೈಷ್ಣವಿ ಸಾವನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು.ಆದರೆ ಶವ ಪರೀಕ್ಷೆಯ ನಂತರ ತನಿಖೆಯಿಂದ ಕೊಲೆಯಾದ ವೈಷ್ಣವಿ ಹವಗಣೆಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿತ್ತು. ಈ ಕೊಲೆ ಮಾಡಿ ವೈಷ್ಣವಿ ಮಾವ ,ಎನ್ ಸಿ ಪಿ ಪಕ್ಷದ ನಾಯಕ ರಾಜೇಂದ್ರ ಹಗವಣೆ ಮತ್ತು ಮೈದುನ ಸುಶೀಲ ತಲೆ ಮರೆಸಿಕೊಂಡಿದ್ದರು.ಆರೋಪಿತರಿಗೆ ಆಶ್ರಯ ಹಾಗು ಆರ್ಥಿಕ ಸಹಾಯ ನೀಡಿದ ಆರೋಪದಡಿ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ನಿವಾಸಿ ಮಾಜಿ ಸಚಿವ ವೀರಕುಮಾರ ಪಾಟೀಲ ಪುತ್ರ ಪ್ರೀತಂ ಪಾಟೀಲ ಅವರನ್ನು ಸೋಮವಾರ ರಾತ್ರಿ ಪುಣೆ ಪೋಲಿಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಐದು ಜನರ ಆರೋಪಿಗಳನ್ನು ಬಂಧಿಸಲಾಗಿದೆ.ಈ ಕುರಿತು ಪುಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.