

ಮಂಗಳೂರು: ನವಮಂಗಳೂರು ಬಂದರ್ ನಲ್ಲಿ ಕಂಟೇನರ್ ಲಾರಿ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಬಿದ್ದು ಅದರಲ್ಲಿದ್ದ ಚಾಲಕ ಆಸ್ಪತ್ರೆಗೆ ಕರೆದೊಯ್ದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಇನ್ನೋರ್ವರು ಪತ್ತೆಯಾಗಿಲ್ಲ.
ಚಾಲಕ ರಾಜೇಸಾಬ್ ಅವರು ಪತ್ತೆಯಾಗಿದ್ದು, ಭೀಮಪ್ಪ ನಾಪತ್ತೆಯಾದವರು.
. ಭಾನುವಾರ ರಾತ್ರಿ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಕಂಟೇನರ್ ಸಮುದ್ರಕ್ಕೆ ಉರುಳಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪಣಂಬೂರು ಪೊಲೀಸರು ಭೇಟಿ ನೀಡಿದ್ದು, ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಹುಡುಕಾಟ ನಡೆಯುತ್ತಿದೆ.