

ಚಿತ್ರದುರ್ಗ: ಸ್ತನ್ಯಪಾನದಿಂದ ನವಜಾತ ಶಿಶುವಿನ ಬೆಳವಣಿಗೆ ಉತ್ತಮವಾಗಿ,ಶಿಶುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಶ್ರೀ ಬಸ ವೇಶ್ವರ ಮೆಡಿಕಲ್ ಕಾಲೇಜು ಡೀನ್ ಡಾ.ಜಿ.ಪ್ರಶಾಂತ್ ಹೇಳಿದರು.
ಶ್ರೀ ಬಸವೇಶ್ವರ ಕಾಲೇಜು ಹಾಗೂ ಐಎಪಿ ಆಶ್ರಯದಲ್ಲಿ ಮಂಗಳ ವಾರ ಶ್ರೀ ಬಸವೇಶ್ವರ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸ್ತನ್ಯಪಾನ ಸಪ್ತಾಹ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಶುವಿನ ಉತ್ತ ಮ ಆರೋಗ್ಯಕ್ಕೆ ಸ್ತನ್ಯಪಾನದ ಅಗತ್ಯವಿದೆ,ಈ ವಿಚಾರದಲ್ಲಿ ತಾಯಂದಿರು ಉದಾಸೀನ ಮಾಡಬಾರದು. ಮಗುವಿನ ಬೆಳವಣಿಗೆ ಅಗತ್ಯ ವಿರುವ ಪೋಷಕಾಂಶಗಳು ತಾಯಿ ಎದೆ ಹಾಲು ಒದಗಿಸುತ್ತದೆ ಎಂದರು.
ಬಸವೇಶ್ವರ ಆಸ್ಪತ್ರೆಯ ನವಜಾತ ಶಿಶು ಮತ್ತು ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಸ್.ಪಿ.ಬಸವಂತಪ್ಪ ಮಾತನಾಡಿ,ಈ ವರ್ಷದ ಸ್ತ ನ್ಯಪಾನ ಸಪ್ತಾಹದ ಘೋಷ ವಾಕ್ಯ,‘ಕೆಲಸ ಮಾಡುವ,ದುಡಿಮೆಯಲ್ಲಿ ತೊಡಗಿದ ತಾಯಂದಿರು ಮಕ್ಕಳಿಗೆ ಎದೆ ಹಾಲು ಉಣಿಸಬೇಕು’ ಎಂಬುದಾಗಿದೆ ಎಂದರು. ಆಸ್ಪತ್ರೆ ಆಡಳಿತಾಧಿಕಾರಿ ಡಾ.ಪಾಲಾಕ್ಷಯ್ಯ ಮಾತನಾಡಿ,ತಾಯಂದಿರು ಎದೆ ಹಾಲು ಉಣಿಸಲು, ಕೆಲಸದ ಸ್ಥಳಗಳಲ್ಲಿ ಸೂಕ್ತ ಸ್ಥಳಾವಕಾಶ ಮಾಡಿಕೊಡುವುದು ಅಗತ್ಯವಿದೆ ಎಂದರು.
ಮಕ್ಕಳ ವಿಭಾಗದ ಡಾ.ಕೆ.ರಾಘವೇಂದ್ರ ಮಾತನಾಡಿ,ಸ್ತನ್ಯಪಾನದಿಂದ ಸ್ತನ ಮತ್ತು ಅಂಡಾಶಯ ಕ್ಯಾನ್ಸರ್‌ನ್ನು ನಿಯಂತ್ರಿಸಬಹುದಾ ಗಿದೆ ಎಂದರು. ಆಸ್ಪತ್ರೆ ಉಪ ವೈದ್ಯಕೀಯ ಅಧೀಕ್ಷಕ ಡಾ.ರಮೇಶ್,ಸ್ತ್ರೀರೋಗ ವಿಭಾಗದ ಮುಖ್ಯಸ್ಥೆ ಡಾ.ಲತಾ, ಎಸ್‌ಜೆಎಂ ನರ್ಸಿಂಗ್ ಕಾಲೇಜು ಪ್ರಾಚಾರ‌್ಯೆ ಸವಿತಾ,ಡಾ.ವಿ.ಶ್ರೀನಿವಾಸ್,ಡಾ.ಬಿ.ಶ್ರೀನಿವಾಸ ಮತ್ತಿತರರು ಇದ್ದರು.
ಇದೇ ವೇಳೆ ಬಸವೇಶ್ವರ ಮೆಡಿಕಲ್ ಕಾ ಲೇಜು ಹಾಗೂ ಎಸ್‌ಜೆಎಂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಸ್ತನ್ಯಪಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಿರು ನಾ ಟಕಗಳನ್ನು ಪ್ರದರ್ಶಿಸಿದರು.
(ಸಿಟಿಡಿ 1ಬ್ರೀಸ್ಟ್ ಫೀಡಿಂಗ್ ವೀಕ್)
ಚಿತ್ರದುರ್ಗದ ಶ್ರೀ ಬಸವೇಶ್ವರ ಕಾಲೇಜಿನಲ್ಲಿ ಮಂಗಳವಾರ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.ಡಾ.ಜಿ.ಪ್ರಶಾಂತ್,ಡಾ.ಪಾಲಾಕ್ಷಯ್ಯ,ಡಾ.ಎಸ್.ಪಿ.ಬಸವಂತಪ್ಪ,ಡಾ.ಕೆ.ರಾಘವೇಂದ್ರ, ಸವಿತಾ,ಡಾ.ಲತಾ,ಡಾ.ವಿ.ಶ್ರೀನಿವಾಸ್, ಡಾ.ರಮೇಶ್,ಡಾ.ಬಿ.ಶ್ರೀನಿವಾ ಸ್ ಇದ್ದರು.