

ಹಿರೇಬಾಗೇವಾಡಿ: ಕೂಲಿ ಕೆಲಸಗಾರನ ಎದೆ ಒದ್ದು ಕೊಲೆ ಮಾಡಿದ ಟನೆ ಹಿರೇಬಾಗೇವಾಡಿಯಲ್ಲಿ ಶನಿವಾರ ಸಂಭವಿಸಿದೆ. ಭೀಮಪ್ಪ ನಿಂಗಪ್ಪ ಕೆಂಡಪ್ಪನವರ (65) ಕೊಲೆಯಾದ ವ್ಯಕ್ತಿ. ನೇಕಾರ ಓಣಿಯ ನಿವಾಸಿ ನಾಗನಗೌಡ ಪಾಟೀಲ ಕೊಲೆ ಮಾಡಿದವ.
ವಯೋಸಹಜ ಕಾಯಿಲೆಯಿಂದ ಭೀಮಪ್ಪ ಕೆಲಸ ಮಾಡಲು ಆಗದೇ ಕೆಲಸಕ್ಕೆ ಬರುತ್ತಿರಲಿಲ್ಲ. ಶನಿವಾರ ಸಹಿತ ಕೆಲಸಕ್ಕೆ ಬಾರದೇ ಭೀಮಪ್ಪ ಮಲಗಿಕೊಂಡಿದ್ದ. ಈ ವೇಳೆ ನಾಗನಗೌಡ ಭೀಮಪ್ಪನಿಗೆ ಅವಾಚ್ಯವಾಗಿ ಬೈದು, ಎದೆಗೆ ಒದ್ದಿದ್ದಾನೆ. ಈ ವೇಳೆ ತೀವ್ರ ಎದೆನೋವಿನಿಂದ ಭೀಮಪ್ಪ ಕುಸಿದು ಬಿದ್ದ. ತಕ್ಷಣ ಭೀಮಪ್ಪನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಲಿಸದೇ ಶನಿವಾರ ಮೃತಪಟ್ಟಿದ್ದಾನೆ. ಈ ಬಗ್ಗೆ ಭೀಮಪ್ಪನ ಮಗ ಹನುಮಂತ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.