ಎದೆ ಹಾಲಿನಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ: ಡಾ. ಸಂಜೀವ್​ ಜೋಶಿ

02GDG04
Published on

ವಿಜಯವಾಣಿ ಸುದ್ದಿಜಾಲ ಗದಗ
ಐಎಂಎ ಮತ್ತು ಇನ್ನರ್​ ವೀಲ್​ ಕ್ಲಬ್​ ಮಿಡ್​ ಟೌನ್​ ಸಹಯೋಗದಿಂದ ಮಂಗಳವಾರ ವಿಶ್ವ ಸ್ತನ್ಯಪಾನ ಸಪ್ತಾಹ ಮತ್ತು ಮಹಿಳಾ ಜಾಗೃತಿ ಕಾರ್ಯಕ್ರಮ ಜರುಗಿತು.
ಡಾ. ಸಂಜೀವ್​ ಜೋಶಿ ಕಾರ್ಯಕ್ರಮ ಉದ್ಘಾಟಿಸಿ ಉಪನ್ಯಾಸ ನೀಡಿದರು. ಶಿಶುವಿಗೆ ತಾಯಿಯ ಎದೆ ಹಾಲನ್ನು ಮಾತ್ರ ಉಣಿಸಬೇಕು. ಜನಿಸಿದ ಒಂದು ಗಂಟೆಯೊಳಗೆ ಎದೆ ಹಾಲನ್ನು ಉಣಿಸಲು ಪ್ರಾರಂಭಿಸ ಬೇಕು. ಶಿಶು ಜನಿಸಿದ 24 ಗಂಟೆವರೆಗೆ ಸ್ನಾನ ಮಾಡಿಸಬಾರದು. ಸ್ತನ್ಯಪಾನವು ಮಗುವಿನ ಸಾರ್ವತ್ರಿಕ ಬೆಳವಣಿಗೆಗೆ ಪೂರಕವಾದ ಆಹಾರವಾಗಿದ್ದು, ಕನಿಷ್ಠ ಆರು ತಿಂಗಳವರೆಗೆ ಯಾವುದೇ ಆಹಾರ ನೀಡದೇ ಕೇವಲ ಎದೆ ಹಾಲು ಮಾತ್ರ ಊಣಿಸಬೇಕು. ಇದರಿಂದ ಮಗುವಿನ ರೋಗ ನಿರೋಧಕ ಶಕ್ತಿ ವೃದ್ಧಿಸಿ ಬೆಳೆವಣಿಗೆಗೆ ಬೇಕಾದ ಎಲ್ಲ ಪೋಷಕಾಂಶಗಳು ದೊರೆಯುತ್ತವೆ. ಆರು ತಿಂಗಳ ನಂತರ ಗಂಜಿ ರೂಪದ ತಿಳುವಾದ ಆಹಾರ ನೀಡಬೇಕು ಎಂದರು.
ಡಾ. ಉದಯ್​ ಕುಲಕಣಿರ್, ಡಾ. ರಾಧಿಕಾ ಕುಲಕಣಿರ್, ವಿಜಯಲಕ್ಷಿ$್ಮ ಬಿರಾದಾರ್​, ಪ್ರೀತಿ ಶಿವಪ್ಪನ ಮಠ, ಸುವರ್ಣಾ ಹನುಗುಡಿ, ಲತಾ ಮುತ್ತಿನ ಪೆಂಡಿಮಠ, ಮಂಗಲಾ ನಾಲ್ವತ್ವಾಡಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net