ಎದೆ ಭಾಗ ಹೊಕ್ಕಿದ್ದ ರಾಡ್ ತೆಗೆದ ವೈದ್ಯರು

h28-abdul
Published on

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ವೇಳೆ ಕಾರ್ವಿುಕನ ಎದೆ ಭಾಗದಲ್ಲಿ ಹೊಕ್ಕಿದ್ದ 10 ಅಡಿ ಉದ್ದದ ರಾಡ್ ತೆಗೆಯುವಲ್ಲಿ ಇಲ್ಲಿನ ಕಿಮ್್ಸ ವೈದ್ಯರು ಯಶಸ್ವಿಯಾಗಿದ್ದಾರೆ.

ಫ್ಲೈ ಓವರ್ ಕಾಮಗಾರಿಯಲ್ಲಿ ತೊಡಗಿದ್ದ ಕೋಲ್ಕತ್ತ ಮೂಲದ ಕಾರ್ವಿುಕ ಅಬ್ದುಲ್ ಗಫಾರ್ ಎದೆಯಲ್ಲಿ ಮಂಗಳವಾರ ಮಧ್ಯಾಹ್ನ ರಾಡ್ ಹೊಕ್ಕಿದೆ. ಆತನನ್ನು ಚಿಕಿತ್ಸೆಗಾಗಿ ಕಿಮ್ಸ್​ಗೆ ದಾಖಲಿಸಲಾಗಿತ್ತು. ಶಸ್ತ್ರ ಚಿಕಿತ್ಸಾ ವಿಭಾಗದ ಡಾ. ಈಶ್ವರ ಹೊಸಮನಿ ಹಾಗೂ ಡಾ. ಅರುಣ ವಾಳ್ವೇಕರ ನೇತೃತ್ವದ ತಂಡ ಎರಡೂವರೆ ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿ, ಹೃದಯದಿಂದ ಸ್ವಲ್ಪ ದೂರದಲ್ಲಿ ನೆಟ್ಟಿದ್ದ ರಾಡ್ ತೆಗೆಯಲು ಹರಸಾಹಸಪಟ್ಟರು.

ಪ್ರಾಣಾಪಾಯದಿಂದ ಪಾರಾಗಿರುವ ಕಾರ್ವಿುಕ ಅಬ್ದುಲ್ ಗಫಾರ್ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕಿಮ್್ಸ ಉಪ ವೈದ್ಯಕೀಯ ಅಧೀಕ್ಷಕ ಡಾ. ರಾಜಶೇಖರ ದ್ಯಾಬೇರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net