ಎತ್ತಿನಹೊಳೆ ಯೋಜನೆಯಿಂದ ಪ್ರಾಯೋಗಿಕವಾಗಿ ನೀರು ಸಾರ್ವಜನಿಕರಿಗೆ ಎಚ್ಚರ

ಎತ್ತಿನಹೊಳೆ ಯೋಜನೆಯಿಂದ ಪ್ರಾಯೋಗಿಕವಾಗಿ ನೀರು ಸಾರ್ವಜನಿಕರಿಗೆ ಎಚ್ಚರ
Published on


ಹಾಸನ : ಸಕಲೇಶಪುರ, ಬೇಲೂರು ಹಾಗೂ ಆಲೂರು ತಾಲೂಕು ವ್ಯಾಪ್ತಿಯಲ್ಲಿ ಎತ್ತಿನಹೊಳೆ ಯೋಜನೆಯ ಗುರುತ್ವಾ ಕಾಲುವೆ ಸರಪಳಿ:0.00 ನಿಂದ 42.00 ಕಿ.ಮೀವರೆಗಿನ ಕಾಮಗಾರಿಯು ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ನೀರನ್ನೆತ್ತಿ ಗುರುತ್ವಾ ಕಾಲುವೆಗೆ ಬಿಡಲು ಉದ್ದೇಶಿಸಲಾಗಿದ್ದು, ಅದರಂತೆ ಪೂರ್ವ ಪ್ರಾಯೋಗಿಕ ಚಾಲನೆಯು ಪ್ರಕ್ರಿಯೆಯಲ್ಲಿರುತ್ತದೆ.
ಇತ್ತೀಚೆಗೆ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಗುಡ್ಡ ಪ್ರದೇಶದಿಂದ ಹಾಗೂ ಹೊಲ ತೋಟಗಳಿಂದ ಹೆಚ್ಚುವರಿ ನೀರು ಎತ್ತಿನಹೊಳೆ ಗುರುತ್ವಾ ಕಾಲುವೆಗೆ ಸೇರುತ್ತಿರುತ್ತದೆ. ಪ್ರಸ್ತುತ ಎತ್ತಿನಹೊಳೆ ಗುರುತ್ವಾ ಕಾಲುವೆ 42.00 ಕಿ.ಮೀ ವರೆಗಿನ ಕಾಮಗಾರಿಯು ಪೂರ್ಣಗೊಂಡಿದ್ದು, ಈ ಮೇಲೆ ತಿಳಿಸಿರುವ ಪೂರ್ವ ಪ್ರಾಯೋಗಿಕ ಚಾಲನೆ ಮತ್ತು ಮಳೆಯಿಂದ ಬರುತ್ತಿರುವ ಹೆಚ್ಚುವರಿ ನೀರನ್ನು ಕಾಲುವೆಯಿಂದ ಹೊರ ಹರಿಸಬೇಕಾಗಿರುವುದರಿಂದ ಸರಪಳಿ. 32.550ಕಿ.ಮೀ.ನಲ್ಲಿ ಅಳವಡಿಸಿರುವ ನೀರನ್ನು ಕಾಗೇದಹಳ್ಳ ಮುಖಾಂತರ ಹರಿಸಿ ವೇದಾವತಿ ನದಿಯ ಕೊಳ್ಳಕ್ಕೆ ಬಿಡಬೇಕಾಗಿರುತ್ತದೆ.
ಆದುದರಿಂದ ಈ ಪ್ರದೇಶದ ವ್ಯಾಪ್ತಿಯಲ್ಲಿ ದನ-ಕರುಗಳನ್ನು ಕಟ್ಟುವುದಾಗಲಿ. ಸಾರ್ವಜನಿಕರು ಸಂಚರ ಮಾಡಬಾರದು. ಇದರಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ ಮತ್ತು ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಈ ಕುರಿತಂತೆ ಯಾವುದೇ ತರಹದ ನಿರ್ಲಕ್ಷ್ಯಗಳಿಂದ ಅಪಘಾತ ಅಥವಾ ಹಾನಿ ಸಂಭವಿಸಿದರೆ ಅವರೇ ಜವಾಬ್ದಾರರಾಗಿರುತ್ತಾರೆ ಎಂದು ಈ ಪ್ರಕಟಣೆ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುತ್ತಿದ್ದೇವೆ. ಸಾರ್ವಜನಿಕರ ನಿರ್ಲಕ್ಷ್ಯದಿಂದ ಆಗುವ ಅನಾಹುತಗಳಿಗೆ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಅರಸೀಕೆರೆ ತಾಲ್ಲೂಕು, ಹಾಸನವು ಜವಾಬ್ದಾರಿಯಾಗಿರುವುದಿಲ್ಲ ಎಂದು ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತದ ಎತ್ತಿನಹೊಳೆ ಯೋಜನಾ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net