ಚಕ್ಕಡಿಗೆ ಟಿಪ್ಪರ್ ಡಿಕ್ಕಿ

29 lxr 2
ಗೊಜನೂರ ಗ್ರಾಮದಲ್ಲಿ ಎಂ ಸ್ಯಾಂಡ್ ಸಾಗಿಸುವ ಟಿಪ್ಪರ್ ಎತ್ತಿನ ಚಕ್ಕಡಿಗೆ ಡಿಕ್ಕಿ ಹೊಡೆದಿದ್ದರಿಂದ ಎತ್ತು ಮತ್ತು ರೈತ ಗಾಯಗೊಂಡಿದ್ದನ್ನು ಖಂಡಿಸಿ ಗ್ರಾಮಸ್ಥರು ಟಿಪ್ಪರ್ ತಡೆದು ಆಕ್ರೋಶ ವ್ಯಕ್ತಪಡಿಸಿದರು.
Published on

ಲಕ್ಷೆ್ಮೕಶ್ವರ: ತಾಲೂಕಿನ ಗೊಜನೂರ ಗ್ರಾಮದಲ್ಲಿ ಎಂ ಸ್ಯಾಂಡ್ ಸಾಗಿಸುವ ಟಿಪ್ಪರ್ ಚಕ್ಕಡಿಗೆ ಡಿಕ್ಕಿ ಹೊಡೆದಿದ್ದರಿಂದ ಎತ್ತು ಮತ್ತು ರೈತ ಗಾಯಗೊಂಡ ಘಟನೆ ನಡೆದಿದೆ. ಇದನ್ನು ಖಂಡಿಸಿ ಗ್ರಾಮಸ್ಥರು ಈ ಮಾರ್ಗವಾಗಿ ಸಂಚರಿಸುವ ಟಿಪ್ಪರ್​ಗಳನ್ನು ತಡೆದು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಬೀರಪ್ಪ ಗುಡ್ಡಣ್ಣವರ ಎಂಬ ರೈತ ಎತ್ತಿನ ಚಕ್ಕಡಿಯಲ್ಲಿ ಕುಟುಂಬ ಸದಸ್ಯರು ಮತ್ತು ಕೂಲಿಕಾರರನ್ನು ಹೊಲಕ್ಕೆ ಕರೆದೊಯ್ಯುತ್ತಿದ್ದರು. ಈ ವೇಳೆ ಟಿಪ್ಪರ್ ಚಕ್ಕಡಿಗೆ ಡಿಕ್ಕಿ ಹೊಡೆದಿದೆ. ಆಗ ಎತ್ತು ಮತ್ತು ರೈತನಿಗೆ ಗಾಯವಾಗಿದೆ. ಅದೃಷ್ಟವವಶಾತ್ ಚಕ್ಕಡಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ವೇಳೆ ಟಿಪ್ಪರ್ ತಡೆದ ಗ್ರಾಮಸ್ಥರು ಚಾಲಕನಿಗೆ ಧರ್ಮದೇಟು ನೀಡಿದ್ದಾರೆ.
ಈ ಮಾರ್ಗವಾಗಿ ಸಂಚರಿಸುವ ಎಲ್ಲ ಲಾರಿ-ಟಿಪ್ಪರ್​ಗಳನ್ನು ಒಂದು ತಾಸು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದ ಶಿರಹಟ್ಟಿ ಮತ್ತು ಲಕ್ಷೆ್ಮೕಶ್ವರ ಪೊಲೀಸ್ ಠಾಣೆಯ ಪಿಎಸ್​ಐ ಸ್ಥಳಕ್ಕೆ ಆಗಮಿಸಿ ರೈತರನ್ನು ಸಮಾಧಾನಪಡಿಸಿ ಲಾರಿ ಚಾಲಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.
ರೈತ ಮುಖಂಡ ಮಹಾಂತಗೌಡ ಪಾಟೀಲ, ಚನ್ನಪ್ಪ ಷಣ್ಮುಕಿ, ವಿರುಪಾಕ್ಷಗೌಡ ಪಾಟೀಲ, ನಿಂಗಪ್ಪ ಕಾಟಿ, ಕೇಶಪ್ಪ ಜಾಲಮ್ಮನವರ, ಬಸವರಾಜ ಜಾಲಮ್ಮನವರ, ಪ್ರಕಾಶ ಗುಡ್ಡಣ್ಣವರ ಇತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net