ಎತ್ತರದ ವ್ಯಕ್ತಿಗೆ ಕೆಎಎಸ್ ಅಧಿಕಾರಿ ನೆರವು

aurad
Published on

ಔರಾದ್: ರಾಜ್ಯದ ಅತಿ ಎತ್ತದ ವ್ಯಕ್ತಿ (೭.೫ ಅಡಿ) ಮಾರುತಿ ಕೋಳಿ ಅವರು ಅನಾರೋಗ್ಯಕ್ಕೆ ಈಡಾಗಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ಯಾದಗಿರಿಯ ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ, ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಭೇಟಿ ನೀಡಿ, ಆರೋಗ್ಯ ವಿಚಾರಿಸಿ, ಧನ ಸಹಾಯ ಮಾಡಿದರು. ತಮ್ಮ ವೇತನದಲ್ಲಿ ಒಂದು ವರ್ಷದಿಂದ ಪ್ರತಿ ತಿಂಗಳು ಎರಡು ಸಾವಿರ ರೂ. ತೆಗೆದಿಟ್ಟು ಒಟ್ಟು ೨೪ ಸಾವಿರ ರೂ. ಸಹಾಯ ಧನ ನೀಡಿ, ನೆರವಿಗೆ ನಿಂತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net