

ಚಿತ್ರದುರ್ಗ:ಕೋಲ್ಕತ್ತಾದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ,ಹತ್ಯೆ ಖಂಡಿಸಿ ಹಾಗೂ ಪ್ರತಿಭಟನಾಕಾರರ ಮೇಲಿನ ದಾಳಿ ವಿರುದ್ಧ ತುರ್ತಾಗಿ ಕಾನೂನು ಕ್ರಮ ಜರುಗಿಸುವಂತೆ ರಾಷ್ಟ್ರಪತಿ ಅವರನ್ನು ಒತ್ತಾಯಿಸಿ ಸೋಮವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅವರಿಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವ ಜನ ಸಂಘಟನೆ ಜಿಲ್ಲಾ ಸಮಿತಿಗಳ ಕಾರ‌್ಯಕರ್ತರು ಮನವಿ ಸಲ್ಲಿಸಿದರು. ಎಐಎಂ ಎಸ್‌ಎಸ್ ಜಿಲ್ಲಾ ಸಂಚಾಲಕಿ ಸುಜಾತಾ,ಎಐಡಿವೈಒ ಮುಖಂಡ ಡಿ.ಕೆ.ಜಯಣ್ಣ,ಕುಮುದಾ,ರವಿಕುಮಾರ್ ಇದ್ದರು.