ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕ್ರಮ ಕೈಗೊಳ್ಳಿ

klb3
ಎಡಿಜಿಪಿ ಎಂ.ಚAದ್ರಶೇಖರ್ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಜೇವರ್ಗಿಯಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಮನವಿಪತ್ರ ಸಲ್ಲಿಸಿದರು. ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ರಮೇಶ ಬಾಬು ವಕೀಲ, ಸಾಯಬಣ್ಣ ದೊಡ್ಡಮನಿ, ರೌಫ್ ಹವಾಲ್ದಾರ್, ಮಹಿಬೂಬ್ ಚನ್ನೂರ ಇತರರಿದ್ದರು.
Published on

ಜೇವರ್ಗಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ ಲೋಕಾಯುಕ್ತ ಎಡಿಜಿಪಿ ಎಂ.ಚAದ್ರಶೇಖರ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಕಾರ್ಯಕರ್ತರು ಬಸವೇಶ್ವರ ವೃತ್ತದ ಬಳಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ರಾಜ್ಯಪಾಲರ ಕಚೇರಿ ಮೇಲೆ ತನಿಖೆ ನಡೆಸುವುದಾಗಿ ಹೇಳಿಕೆ ನೀಡುವ ಮೂಲಕ ದರ್ಪ ಮೆರೆದಿದ್ದ ಲೋಕಾಯುಕ್ತ ಎಡಿಜಿಪಿ ಅವರ ವಿರುದ್ಧ ಸುದ್ದಿಗೋಷ್ಠಿಯೊಂದರಲ್ಲಿ ಕುಮಾರಸ್ವಾಮಿ ಕಿಡಿಕಾರಿದ್ದರು. ಕೇಂದ್ರ ಸಚಿವರ ಆರೋಪವನ್ನು ಮನಸ್ಸಿನಲ್ಲಿಟ್ಟುಕೊಂಡು ಎಸ್‌ಐಟಿ ಸದಸ್ಯರಿಗೆ ಬರೆದ ಪತ್ರದಲ್ಲಿ ಎಚ್‌ಡಿಕೆ ವಿರುದ್ಧ ಅವಾಚ್ಯ ಶಬ್ದ ಬಳಸಿದ್ದಾರೆ. ಕೀಳುಮಟ್ಟದ ಪದ ಬಳಕೆ ಮಾಡಿದ್ದಾರೆ. ಕೇಂದ್ರ ಕ್ಯಾಬಿನೆಟ್ ಸಚಿವರ ಬಗ್ಗೆ ಹಗುರವಾಗಿ ಮಾತನಾಡಿದ ಎಡಿಜಿಪಿಯನ್ನು ಅಮಾನತುಗೊಳಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್ ಮಲ್ಲಣ್ಣ ಯಲಗೋಡ ಅವರಿಗೆ ಮನವಿಪತ್ರ ಸಲ್ಲಿಸಿದರು. ಪ್ರಮುಖರಾದ ರಮೇಶಬಾಬು ವಕೀಲ, ರೌಫ್ ಹವಾಲ್ದಾರ್, ಎಸ್.ಎಸ್.ಸಲಗರ, ಶಿವಾನಂದ ದ್ಯಾಮಗೊಂಡ, ಪುಂಡಲಿಕ ಗಾಯಕವಾಡ, ಮಹಿಬೂಬ್ ಚನ್ನೂರ, ಶರಣು ಹೊಸಮನಿ, ಆಥೀಕ್ ಶೇಠ, ಸಾಯಬಣ್ಣ ದೊಡ್ಡಮನಿ, ರಾಜಶೇಖರ ಕಲ್ಲಹಂಗರಗಾ, ದೊಡ್ಡಗೌಡ ಪಾಟೀಲ್, ಅಶೋಕ ಗುಡೂರ, ರೇವಣಸಿದ್ದ ಅಕ್ಕಿ, ಚಂದ್ರಶೇಖರ ಬೆಲ್ಲದ, ವಿಶ್ವನಾಥ ಇಮ್ಮಣ್ಣಿ, ನಾಸೀರ್ ಖಾನ್ ನಾಡಗೌಡ, ಬಸಲಿಂಗಪ್ಪಗೌಡ ವಸ್ತಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net