ಎಟಿಎಂಇ ಕಾಲೇಜಿನಲ್ಲಿ ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮ

32
Published on

ಮೈಸೂರು ನಗರದ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಫೋರೆನ್ಸಿಕ್ಸೃ್ ಕುರಿತು ಇತ್ತೀಚೆಗೆ ಒಂದು ವಾರದ ರಾಜ್ಯ ಮಟ್ಟದ ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪಾಸ್-3 ಸೈಬರ್‌ಲ್ಯಾಬ್ಸ್ ಮೈಸೂರು ನಿರ್ದೇಶಕ ಡಾ. ಎ.ಎಂ. ಸುಧಾಕರ ಮಾತನಾಡಿ, ಸೈಬರ್ ಸೆಕ್ಯುರಿಟಿ ಮತ್ತು ಡಿಜಿಟಲ್ ಫೊರೆನ್ಸಿಕ್ಸ್‌ನಲ್ಲಿನ ಉದಯೋನ್ಮುಖ ಪ್ರವೃತ್ತಿಗಳ ಸರಬರಾಜು, ಆರೋಗ್ಯದ ಮೇಲಿನ ರಾನ್ಸಮ್‌ವೇರ್ ದಾಳಿಯ ವಿವಿಧ ಪ್ರಕರಣಗಳ ಅಧ್ಯಯನ ಕುರಿತು ಮಾಹಿತಿ ಹಂಚಿಕೊಂಡರು.
ಧಾರವಾಡದ ಅಗಮ್ಯ ಇನ್ಫೋಟೆಕ್‌ನ ಸಂಸ್ಥಾಪಕ ಮತ್ತು ಎಂಡಿ ಮಹೇಶ್ ವಸ್ತ್ರದ್, ನೆಟ್‌ವರ್ಕ ಸೆಕ್ಯುರಿಟಿ, ಪೋರ್ಟ ಸ್ಕ್ಯಾನಿಂಗ್, ಶೋಷಣೆ, ಎನ್.ಮ್ಯಾಪ್ ಮತ್ತು ಮೆಟಾಸ್‌ಪ್ರೋಯಿಟ್ ಫ್ರೇಮ್‌ವರ್ಕ್‌ನಲ್ಲಿನ ಪರಿಕರಗಳ ಮೇಲೆ ಕಾರ್ಯಾಗಾರ ನಡೆಸಿದರು.
ಪುತ್ತೂರಿನ ವಿಸಿಇಟಿಯ ಪ್ರಾಧ್ಯಾಪಕ ಡಾ.ಎಂ.ಆರ್.ಲೋಕೇಶ್, ಸೈಬರ್ ಮತ್ತು ಡಿಜಿಟಲ್ ಫೊರೆನ್ಸಿಕ್ಸ್‌ನಲ್ಲಿ ಬ್ಲಾಕ್ ಚೈನ್‌ನ ಮಹತ್ವದ ಕುರಿತು ಮಾತನಾಡಿದರು.
ಮೈಸೂರಿನ ಜೆಎಸ್‌ಎಸ್‌ಎಸ್‌ಟಿಯು ಸಹ ಪ್ರಾಧ್ಯಾಪಕಿ ಡಾ.ಚೆನ್ನಮ್ಮ ಅವರು ಡಿಜಿಟಲ್ ಇಮೇಜಿಂಗ್ ಫೊರೆನ್ಸಿಕ್ಸ್ , ಜೆಪಿಇಜಿ ಸ್ವೂಪ್,ಪೋಟೋ ಫೊರೆನ್ಸಿಕ್ಸೃ್, ಟಿನ್ ಐ ಮುಂತಾದ ಉಪಕರಣಗಳಿಂದ ನೈಜ ಚಿತ್ರಗಳು ಮತ್ತು ನಕಲಿ ಚಿತ್ರಗಳನ್ನು ಪತ್ತೆಹಚ್ಚಲು ಸಹಾಯ ಮಾಡುವ ಸಾಧನಗಳ ಕುರಿತು ಮಾಹಿತಿ ನೀಡಿದರು.
ಪಾಸ್-3 ಸೈಬರ್ಲ್ಯಾಬ್ಸ್ ಮೈಸೂರು ನಿರ್ದೇಶಕ ಡಾ.ಕೆ.ಟಿ.ವೀರಮಂಜ, ಅವರು ಡಿಜಿಟಲ್ ಫೊರೆನ್ಸಿಕ್ಸೃ್ ಮತ್ತು ಮೊಬೈಲ್ ಫೋರೆನ್ಸಿಕ್ಸ್ ಕುರಿತು ಮಾತನಾಡಿ, ಮೊಬೈಲ್ ಡೇಟಾ ಮರುಪಡೆಯುವಿಕೆಯ ಮುಂಗಡ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಿದರು. ಜೆಎಸ್‌ಎಸ್‌ಎಸ್‌ಟಿಯು ಪ್ರಾಧ್ಯಾಪಕ ಡಾ.ಎಸ್.ಪಿ.ಶಿವಪ್ರಕಾಶ್ ಅವರು ಐಒಟಿ ದಾಳಿಗಳ ಬಗ್ಗೆ ಮಾಹಿತಿ ಜೊತೆಗೆ ಐಒಟಿ ಭದ್ರತಾ ಸಾಧನಗಳಾದ ಆರ್ಮಿಸ್, ಫೋರ್ಸ್‌ಕೌಟ್, ಜಿಂಗ್‌ಬಾಕ್ಸೃ್, ಮುಕಾನಾ ಮುಂತಾದವುಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ರಾಜ್ಯದ ವಿವಿಧ ಕಾಲೇಜುಗಳ ಅಧ್ಯಾಪಕರು ಶಿಕ್ಷಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net