

ಕಲಬುರಗಿ: ನಗರದ ವ್ಯಾಪ್ತಿಯಲ್ಲಿರುವ ಬ್ಯಾಂಕ್‌ಗಳು, ಎಟಿಎಂಗಳ ವ್ಯವಹಾರ, ಹಣಕಾಸು ವಿಲೇವಾರಿ ಎಚ್ಚರಿಕೆಯಿಂದ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಸೂಚಿಸಿದರು.
ನಗರದ ಪೊಲೀಸ್ ಆಯುಕ್ತಾಲಯದಲ್ಲಿ ಶನಿವಾರ ನಗರದ ಎಲ್ಲ ಬ್ಯಾಂಕ್‌ಗಳ, ಕೋ ಆಪರೇಟಿವ್ ಸೊಸೈಟಿಗಳ, ವಿವಿಧ ಹಣಕಾಸು ಸಂಸ್ಥೆಗಳ ವ್ಯವಸ್ಥಾಪಕ ಸಭೆ ನಡೆಸಿ ಮಾತನಾಡಿ, ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಸಿಸಿ ಟಿವಿ ಕ್ಯಾಮೆರಾ, ತರಬೇತಿ ಹೊಂದಿದ ಭದ್ರತಾ ಸಿಬ್ಬಂದಿ, ಮುಂಜಾಗ್ರತೆ ಎಚ್ಚರಿಸುವ ಅಲಾರಾಂ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಿದರು.
ಬ್ಯಾಂಕ್‌ನಿAದ ಎಟಿಎಂಗಳಿಗೆ ಹಣವನ್ನು ಕಳುಹಿಸುವಾಗ ನುರಿತ ಭದ್ರತಾ ಸಿಬ್ಬಂದಿಯನ್ನು ಆಯುದ್ಧದ ಜತೆಗೆ ಕಡ್ಡಾಯವಾಗಿ ನೇಮಿಸಿ ಕಳುಹಿಸಬೇಕು. ಖಾಸಗಿ ಸಂಸ್ಥೆಗಳಿAದ ಭದ್ರತಾ ಸಿಬ್ಬಂದಿಯನ್ನು ನೇಮಿಸುವಾಗ ಪೊಲೀಸ್ ಇಲಾಖೆಯಿಂದ ಪೊಲೀಸ್ ಪರಿಶೀಲನಾ ಪ್ರಮಾಣ ಪತ್ರ ಸಲ್ಲಿಸಿದವರಿಗೆ ಮಾತ್ರ ನೇಮಿಸಬೇಕು ಎಂದರು.
ಎಲ್ಲ ಬ್ಯಾಂಕ್, ಕೋ ಆಪರೇಟಿವ್ ಸೊಸೈಟಿ, ಹಣಕಾಸು ಸಂಸ್ಥೆಗಳಲ್ಲಿ ಸೈಬರ್ ಅಪರಾಧಗಳ ಕುರಿತ ಪೋಸ್ಟರ್‌ಗಳನ್ನು ಬ್ಯಾಂಕ್ ಆವರಣಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು, ಪೊಲೀಸ್ ಅಧಿಕಾರಿಗಳಿಗೂ ಹೆಚ್ಚಿನ ಗಸ್ತು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು. ತುರ್ತು ಸಂದರ್ಭದಲ್ಲಿ ಸಹಾಯವಾಣಿ ೧೧೨ಗೆ ಕರೆಮಾಡಿ ದೂರುಗಳನ್ನು ಸಲ್ಲಿಸುವಂತೆ ತಿಳಿಸಿದರು. ಡಿಸಿಪಿ ಕನಿಕಾ ಸಿಕ್ರಿವಾಲ್, ಬ್ಯಾಂಕ್‌ಗಳ ವ್ಯವಸ್ಥಾಪಕರು ಇದ್ದರು.