ಎಟಿಎಂ ಕಾರ್ಡ್ ಬದಲಾಯಿಸಿ 1 ಲಕ್ಷ ರೂ. ದೋಚಿದ ಅಪರಿಚಿತರು

3
Published on

ಬೇಲೂರು :ಎಟಿಎಂ ಕಾರ್ಡ್ ಬದಲಾಯಿಸಿ ಅಪರಿಚಿತನೊಬ್ಬ ಖಾತೆಯಿಂದ 1 ಲಕ್ಷ ರೂ. ದೋಚಿರುವ ಪ್ರಕರಣ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ತಾಲೂಕಿನ ಪ್ರಸಾದಿಹಳ್ಳಿ ಗ್ರಾಮದ ಈರೇಗೌಡ ಎಂಬುವವರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿದೆ. ನ. 15 ರಂದು ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿರುವ ಎಟಿಎಂಗೆ ತೆರಳಿದ್ದ ಈರೇಗೌಡ 5 ಸಾವಿರ ರೂ. ಡ್ರಾ ಮಾಡಿಕೊಂಡಿದ್ದರು. ಆಗ ಅವರ ಹಿಂದೆಯೇ ನಿಂತಿದ್ದ ಅಪರಿಚಿತ ಡೆಬಿಟ್ ಕಾರ್ಡ್‌ನ ಪಾಸ್‌ವರ್ಡ್ ನೆನಪಿಟ್ಟುಕೊಂಡು ಈರೇಗೌಡ ಅವರಿಗೆ ಗೊತ್ತಾಗದಂತೆ ತನ್ನ ಬಳಿಯಿದ್ದ ಬೇರೆ ಕಾರ್ಡ್ ಕೊಟ್ಟು ಅವರ ಕಾರ್ಡ್ ತಾನು ಇಟ್ಟುಕೊಂಡಿದ್ದ. ಕೆಲ ಸಮಯದ ಬಳಿಕ ಈರೇಗೌಡ ಅವರ ಮೊಬೈಲ್‌ಗೆ 1 ಲಕ್ಷ ರೂ. ಹಣ ಡ್ರಾ ಆಗಿರುವ ಸಂದೇಶ ಬಂದಿದ್ದು, ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಡೆಬಿಟ್ ಕಾರ್ಡ್ ಕಳುವಾಗಿರುವ ವಿಚಾರ ತಿಳಿದಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net