ಎಚ್‌ಡಿಸಿಸಿ ನಿರ್ದೇಶಕರಾಗಿ ಎಂ.ಎ.ನಾಗರಾಜ್ ಆಯ್ಕೆ

22blrp2.
Published on

ಬೇಲೂರು: ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಎಚ್‌ಡಿಸಿಸಿ) ಬ್ಯಾಂಕ್‌ಗೆ ಮೂರನೇ ಬಾರಿಗೆ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ.ನಾಗರಾಜ್ ಅವರನ್ನು ಗುರುವಾರ ಕೆಂಪೇಗೌಡ ವೃತ್ತದಲ್ಲಿ ಅಭಿಮಾನಿಗಳು ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಂ.ಎ.ನಾಗರಾಜ್, ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಡೆಯುತ್ತಿದ್ದು ಎರಡನೇ ಸ್ಥಾನದಲ್ಲಿದೆ. ಯಾವುದೇ ರಾಜಕೀಯ ಮಾಡದೆ ಶಾಸಕ ಎಚ್.ಕೆ.ಸುರೇಶ್ ಅವರ ಸಹಕಾರ ಪಡೆದು ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಮುಂದಾಗಲಿದ್ದೇನೆ ಎಂದರು.

ಬಳಿಕ ಶ್ರೀ ಬಾಲಾಗಂಗಾಧರನಾಥ ಸ್ವಾಮೀಜಿ, ಶ್ರೀ ಬಸವೇಶ್ವರ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಪುರಸಭೆ ಮಾಜಿ ಅಧ್ಯಕ್ಷ ಬಿ.ಗಿರೀಶ್, ದಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಣಸವಳ್ಳಿ ಅಶ್ವತ್ಥ್, ಬಿಜೆಪಿ ಮುಖಂಡ ಜಿ.ಕೆ.ಕುಮಾರ್, ಬೆಂಬಲಿಗರಾದ ಸಿ.ಎಚ್.ಮಹೇಶ್, ಎಂ.ಡಿ.ದಿನೇಶ್, ವೆಂಕಟೇಶ್, ನವೀನ್, ಮಲ್ಲೇಗೌಡ, ಗುರುಪ್ರಸಾದ್, ಗಿರೀಶ್, ಮಲ್ಲೇಶ್, ನಾಗೇಶ್, ಪ್ರಸಾದ್, ಮೋಹನ್, ಸತೀಶ್, ಸಿ.ಎಂ.ಪೃಥ್ವಿ, ಬೋಜೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net