

ಚಾಮರಾಜನಗರ: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಮಂತ್ರಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗುಣಮುಖರಾಗಲೆಂದು ಕರ್ನಾಟಕ ಸೇನಾ ಪಡೆದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಗುರುವಾರ ಎಚ್.ಡಿ.ದೇವೇಗೌಡರ ಹೆಸರಿನಲ್ಲಿ ಸಂಘಟನೆಯ ಸದಸ್ಯರು ಅರ್ಚನೆ ಮಾಡಿಸಿ ಪೂಜೆ ಮಾಡಿಸಲಾಯಿತು. ಬಳಿಕ ಈಡುಗಾಯಿ ಹೊಡೆದು ಎಚ್.ಡಿ.ದೇವೇಗೌಡರ ಆರೋಗ್ಯ ವೃದ್ಧಿಸಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಇದೇ ವೇಳೆ ಕರ್ನಾಟಕ ಸೇನಾ ಪಡೆದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ದೇವೇಗೌಡರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಶೀಘ್ರದಲ್ಲೇ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದೇವೆ. ರಾಜಕೀಯ ಮುತ್ಸದ್ಧಿ ದೇವೇಗೌಡರ ಸೇವೆ ಮತ್ತು ಮಾರ್ಗದರ್ಶನ ದೇಶಕ್ಕೆ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಈ ವೇಳೆ ಮುಖಂಡರಾದ ರವಿಚಂದ್ರಪ್ರಸಾದ್, ಪಣ್ಯದಹುಂಡಿ ರಾಜು, ಮಹೇಶ್‌ಗೌಡ, ಕರಿಯನಟ್ಟೆ ರಘು, ಕರಿಯನಕಟ್ಟೆ ಚಿನ್ನಸ್ವಾಮಿ, ವೆಂಕಟಯ್ಯನಛತ್ರ ಸತೀಶ್, ಹೊಮ್ಮ ಲೋಕೇಶ್, ಕರಿಯನಟ್ಟೆ ಮಾದೇಶ್, ರಾಜು ಅಮಚವಾಡಿ, ಮಹೇಶ, ಮುತ್ತುರಾಜು, ಶಿವಣ್ಣ ಹೊಸೂರು, ರಾಜಣ್ಣ ಚಂದಕವಾಡಿ ಮತ್ತು ಇತರರು ಉಪಸ್ಥಿತರಿದ್ದರು.