ಎಚ್‌ಡಿಕೆ ಸಿಎಂ ಆಗುವುದು ಸೂರ್ಯ ಚಂದ್ರರಷ್ಟೆ ಸತ್ಯ

08M.D.R.1
Published on

ಮದ್ದೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದು ಸೂರ್ಯ ಚಂದ್ರರಷ್ಟೆ ಸತ್ಯ ಎಂದು ಶಾಸಕ ಸುರೇಶ್‌ಗೌಡ ಅವರ ಪುತ್ರಿ ಧನ್ಯತಾ ಸುರೇಶ್‌ಗೌಡ ವಿಶ್ವಾಸ ವ್ಯಕ್ತಪಡಿಸಿದರು.


ತಾಲೂಕಿನ ಕೊಪ್ಪ ಹೋಬಳಿಯ ತರಮನಕಟ್ಟೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಸಿನ ಮತ ಪ್ರಚಾರ ಕೈಗೊಂಡು ಶನಿವಾರ ಮಾತನಾಡಿ ಅವರು, ಕುಮಾರಸ್ವಾಮಿ ಅವರಿಗೆ ರೈತರು, ಕೂಲಿ ಕಾರ್ಮಿಕರು, ಅಲ್ಪಸಂಖ್ಯಾತರು, ಕಾರ್ಮಿಕರು ಸೇರಿದಂತೆ ಪ್ರತಿಯೊಂದು ವರ್ಗದ ಬಗ್ಗೆಯೂ ವಿಶೇಷ ಕಾಳಜಿಯಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದರು ಪ್ರತಿಯೊಬ್ಬರಿಗೂ ಅನುಕೂಲವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.


ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಸ್ತ್ರೀಶಕ್ತಿ ಸಂಘಗಳ ಸಾಲವನ್ನು ಮನ್ನಾ ಮಾಡಲಿದ್ದಾರೆ. ಆಟೋ ಚಾಲಕರಿಗೆ 2,500 ಗೌರವಧನ ನೀಡಲಿದ್ದಾರೆ. ಪ್ರತಿ ಮನೆಗೆ ವರ್ಷಕ್ಕೆ 5 ಸಿಲಿಂಡರ್ ಉಚಿತವಾಗಿ ವಿತರಿಸುವುದು ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಜಾರಿಗೆ ರಾಜ್ಯದ ಜನರಿಗೆ ಅನುಕೂಲ ಕಲ್ಪಿಸಲಿದ್ದಾರೆಂದರು.


ನನ್ನ ತಂದೆ ಶಾಸಕ ಸುರೇಶ್‌ಗೌಡ ಅವರು ವಿರೋಧಪಕ್ಷದಲ್ಲಿದ್ದರೂ ತಾಲೂಕಿನಲ್ಲಿ ಶೇ.90 ರಷ್ಟು ಅಭಿವೃದ್ಧಿ ಕೆಲಸ ಮಾಡಿ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಕರೆ ಮಾಡಿ ಕುಂದುಕೊರತೆ ಆಲಿಸಿ ಹಗಲಿರುಳೆನ್ನದೆ ಸ್ಥಳದಲ್ಲೇ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಕ್ಷೇತ್ರದ ಜನರ ಮನಸು ಗೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ತಾಲೂಕಿನ ಕೌಡ್ಲೆ, ಘಟ್ಟಳ್ಳಿ, ಯಡವನಹಳ್ಳಿ, ತರಮನ ಕಟ್ಟೆ, ಕೆ.ಜಿ. ಕೊಪ್ಪಲು, ಜೋಗಿಗೌಡನ ಕೊಪ್ಪಲು ಸೇರಿದಂತೆ ಇತರ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬಿದರಕೋಟೆ ಕುಶ, ತಾ.ಪಂ. ಮಾಜಿ ಅಧ್ಯಕ್ಷೆ ಲಕ್ಷ್ಮೀ ಚನ್ನರಾಜು, ಮುಖಂಡರಾದ ಕೌಡ್ಲೆ ರಾಮಣ್ಣ, ಸುನೀತಾ, ಶಿವರಾಮು, ತಮ್ಮಯ್ಯ, ರಾಜೇಶ್, ಬೋರಯ್ಯ, ಪ್ರಭಾಕರ್, ರಮೇಶ್, ಬಿಳಿಯಪ್ಪ, ಗಿರೀಶ್, ಶ್ರೀನಿವಾಸ, ಕೆಂಪಣ್ಣ, ಸ್ವಾಮಿ, ಸೀನಾ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net