

ಕಂಪ್ಲಿ:ವಿದ್ಯಾರ್ಥಿಗಳು ಸೋಲು-ಗೆಲುವವನ್ನು ಖುಷಿಯಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಹಸೀಲ್ದಾರ್ ಗೌಸಿಯಾ ಬೇಗಂ ಹೇಳಿದರು.
ಇಲ್ಲಿನ ಸತ್ಯನಾರಾಯಣಪೇಟೆ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಮಂಗಳವಾರ ಆರಂಭಗೊಂಡ ವಲಯ-1ರ 49ನೇ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿ ಬೆಳಗಿಸಿ ಮಾತನಾಡಿದರು. ನಿತ್ಯ ಅಭ್ಯಾಸದಲ್ಲಿ ತೊಡಗಿಕೊಳ್ಳುವ ಮೂಲಕ ಕ್ರೀಡಾಕೌಶಲ ಮೈಗೂಡಿಸಿಕೊಳ್ಳಬೇಕು. ಎಚ್ಚರಿಕೆಯಿಂದ ಆಟವಾಡಿದಲ್ಲಿ ಗೆಲುವು ಸಾಧಿಸಲು ಸಾಧ್ಯ ಎಂದರು.
ವಲಯ-1ರ ಕ್ರೀಡಾಕೂಟದ ಅಧ್ಯಕ್ಷ ಯು.ರಾಜಶೇಖರ ಮಾತನಾಡಿ, 1 ರಿಂದ 7ನೇ ತರಗತಿತನಕದ 26 ಶಾಲೆಗಳ 600 ಮಕ್ಕಳು, 10 ವೈಯಕ್ತಿಕ, 4 ಗುಂಪು ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ
ಮಕ್ಕಳು ಸೋಲು-ಗೆಲುವಿನ ಭಯ ತೊರೆದು ನಿಶ್ಚಲ ಮನೋಭಾವದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಡಿ.ಎನ್.ಕರಿಬಸಪ್ಪ, ಎಂ.ಎ.ನಾಗನಗೌಡ, ಹನುಮಂತಪ್ಪ, ಮಾಲನ್ ಬೀ, ಜಿ.ವೀರೇಶ್, ಪುಲ್ಲಯ್ಯ, ಕರೀಮ್ ಸಾಬ್, ಸುನೀತಾ, ರಾಜೇಶ್ವರಿ, ಜಡೆಪ್ಪ, ರುದ್ರಪ್ಪ ಜೋಗಿ, ಸಿಆರ್‌ಪಿಗಳಾದ ರೇಣುಕಾರಾಧ್ಯ, ಹನುಮಂತಪ್ಪ, ಭೂಮೇಶ್ವರ್ ಇತರರಿದ್ದರು.