ಎಚ್ಕೆಸಿಸಿಐ ಸಹಾಯವಾಣಿ ಕಾರ್ಯಾರಂಭ

1408Klb02
Published on

ಕಲಬುರಗಿ: ಕರೊನಾ ಹಾವಳಿಯಿಂದಾಗಿ ತಲ್ಲಣಿಸಿರುವ ಕೈಗಾರಿಕೆ ಹಾಗೂ ವ್ಯಾಪಾರ ಕ್ಷೇತ್ರವನ್ನು ಮರಳಿ ಹಳಿಗೆ ತರಲು ಮತ್ತು ದುಡಿಯಲು ಹೋಗಿ ಮರಳಿದವರಿಗೆ ಮಾರ್ಗದರ್ಶನ ಜತೆಗೆ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳಿಗೆ ಸರ್ಕಾರದ ಸವಲತ್ತು ಇತರ ಮಾಹಿತಿ ನೀಡಲು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆ (ಎಚ್ಕೆಸಿಸಿಐ) ಸಹಾಯವಾಣಿ ಆರಂಭಿಸಿದೆ. ರಾಜ್ಯದಲ್ಲೇ ಇದು ಮೊದಲ ಪ್ರಯತ್ನ.
ಸಹಾಯವಾಣಿ ಸೇವೆಗೆ ಕೈಗಾರಿಕೆ ಇಲಾಖೆ ಜಂಟಿ ನಿದರ್ೇಶಕ ಮಾಣಿಕ್ ರಘೋಜಿ ಮತ್ತು ಎಂಎಸ್ಎಂಇ ಸಹಾಯಕ ನಿರ್ದೇಶಕ ಬಿ.ಎಸ್. ಜವಳಗಿ ಶುಕ್ರವಾರ ಮೌಸ್ ಕ್ಲಿಕ್ ಮಾಡುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಮಾಣಿಕ್ ರಘೋಜಿಯವರು ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪುನಶ್ಚೇತನ ಸೇರಿ ಹೊಸದಾಗಿ ಆರಂಭಿಸಲು ಕೇಂದ್ರ ಸಕರ್ಾರ ಹಲ ಯೋಜನೆಗಳನ್ನು ಘೋಷಿಸಿದೆ. ಅವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಸದ್ಬಳಕೆ ಮಾಡಿಕೊಳ್ಳಲು ಹೇಳಿದರು.
ಕರೊನಾ ಹೊತ್ತಿನಲ್ಲಿ ಎಲ್ಲ ಕೈಗಾರಿಕೆಗಳು ಮಚ್ಚಿದ್ದರೂ ದೇಶದ ಜನರಿಗೆ ತೊಗರಿ ಬೇಳೆ ಪೂರೈಸಲು ಇಲ್ಲಿನ ದಾಲ್ಮಿಲ್ಗಳು ಕಾರ್ಯನಿರ್ವಹಿಸಿವೆ. ಉತ್ಪಾದಿಸಿದ ಬೇಳೆ ಸಾಗಿಸಲು ಜಿಲ್ಲಾಧಿಕಾರಿ ಅನುವು ಮಾಡಿಕೊಟ್ಟಿದ್ದರಿಂದ ಉದ್ಯಮಿಗಳ ಪರಿಹಾರ ಕಾಣುವಂತಾಗಿದೆ. ಅಲ್ಲದೆ ಉದ್ಯಮಿಗಳಿಗೆ ಶೇ.20 ಲೀಡ್ ಬ್ಯಾಂಕ್ ಸಾಲ ನೀಡಿದ್ದು, ಅದರಲ್ಲಿ ಬಹುಪಾಲು ಕೆನರಾ ಬ್ಯಾಂಕ್ ಹೊಂದಿದೆ ಎಂದರು.
ವಿಟಿಯು ಪ್ರಾಧ್ಯಾಪಕ ಪ್ರೊ.ಶಿವರಾಮೇಗೌಡ ಮಾತನಾಡಿ, ಕರೊನಾದಿಂದ ಎಂಎಸ್ಇ ಸೇರಿ ಎಲ್ಲ ಉದ್ಯೋಗಿಗಳು ಆಥರ್ಿಕ ಸಂಕಷ್ಟಕ್ಕೆ ಸಿಲುಕಿ ಜರ್ಜರಿತರಾಗಿದ್ದಾರೆ ನಿಜ. ಆದರೆ ಮಾನಸಿಕವಾಗಿ ಗಟ್ಟಿಯಾಗುವ ಮೂಲಕ ನೀವು ಮುನ್ನುಗ್ಗಬೇಕು ಎಂದು ಕಿವಿಮಾತು ಹೇಳಿದರು.
ಎಂಎಸ್ಎಂಇ ಸಹಾಯಕ ನಿದರ್ೇಶಕ ಬಿ.ಎಸ್. ಜವಳಗಿ, ಎಚ್ಕೆಸಿಸಿಐ ಅಧ್ಯಕ್ಷ ಅಮರನಾಥ ಸಿ.ಪಾಟೀಲ್, ಉಪಾಧ್ಯಕ್ಷ ಶರಣಬಸಪ್ಪ ಪಪ್ಪಾ, ಕಾರ್ಯದಶರ್ಿ ಶಶಿಕಾಂತ ಪಾಟೀಲ್, ಸದಸ್ಯರಾದ ಪ್ರಶಾಂತ ಮಾನಕರ್, ಆರ್.ಕೆ. ಜಗದೀಶ, ಮನೀಷ್ ಜಾಜು, ಶಿವರಾಜ ಇಂಗಿನಶೆಟ್ಟಿ, ಚನ್ನಬಸಯ್ಯ ನಂದಿಕೋಲಮಠ, ಸಂತೋಷ ಲಂಗರ, ಬಸವರಾಜ ಹಡಗಿಲ್, ಗೋಪಾಲ ಬುಚನಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net