ಎಚ್‌ಐವಿ ವಿರುದ್ಧ ಜಾಗೃತರಾಗಿರಿ,ಯುವ ಜನರಿಗೆ ಡಿಎಸ್ ಸಲಹೆ

CTD AIDS DINACHARANE----
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಚಿತ್ರದುರ್ಗ: ದೇಶದಲ್ಲಿ ಎಚ್‌ಐವಿ ಸೊಂಕಿಗೆ ತುತ್ತಾಗುತ್ತಿರುವವರ ಪೈಕಿ ಹೆಚ್ಚಿನವರು ಯುವಕರೆ ಎಂದು ಜಿಲ್ಲಾಸ್ಪತ್ರೆ ಡಿಎಸ್ ಡಾ.ಎಸ್.ಪಿ.ರವೀಂದ್ರ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಡಳಿತ,ಜಿಪಂ,ಆರೋಗ್ಯಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜಿನ ಶ್ರೀ ಗುರು ವಾಲ್ಮೀಕಿ ಮಹರ್ಷಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಉದ್ಘಾಟಿಸಿ ಮಾತನಾ ಡಿ,ಯುವ ಜನರು ಎಚ್‌ಐವಿ ಸೋಂಕಿನೆಡೆ ಜಾಗೃತಿ ವಹಿಸಬೇಕು. ಈ ಸೋಂಕನ್ನು ಸಂಪೂರ್ಣ ತಡೆಗಟ್ಟಲು ಸರ್ಕಾರ ಹಲವು ರೀತಿಯ ಕ್ರಮ ಗಳನ್ನು ಕೈಗೊಂಡಿದೆ.

ಅಸುರಕ್ಷಿತ ಲೈಂಗಿಕ ಕ್ರಿಯೆ ಇತ್ಯಾದಿಗಳಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಯುವಕರು ಮಾದಕ ವ್ಯಸನ ತುತ್ತಾಗುವುದರ ಜತೆಗೆ ಸೋಂ ಕಿಗೂ ಬಲಿಯಾಗುತ್ತಿದ್ದಾರೆ. ಸೋಂಕಿಗೆ ಒಳಗಾದವರು ಮುಜುಗರಕ್ಕೆ ಒಳಗಾಗದೆ ಪರೀಕ್ಷಿಗೆ ಒಳಗಾಗಿ ಎಚ್‌ಐವಿ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸ ಬೇಕೆಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಭಿನವ್ ಮಾತನಾಡಿ,ಸೋಂಕಿಗೆ ತುತ್ತಾಗಿ ಬದುಕುತ್ತಿರುವ ದೇಶದ ಶೇ.40ರಷ್ಟು ಜನರು 15-29 ವರ್ಷ ವಯಸ್ಸಿನವರು, ಶೇ.83 ಜನರು 15ರಿಂದ 49 ವರ್ಷ ವಯಸ್ಸಿನವರು ಮತ್ತು ಶೇ.39 ಮಹಿಳೆಯರಿದ್ದಾರೆ. ಜಿಲ್ಲೆಯಲ್ಲಿ ಶೇ 0.33 ಸೋಂ ಕಿತ ರಿದ್ದು,ರಾಜ್ಯದಲ್ಲಿ 22ನೇ ಸ್ಥಾನದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅತ್ಯುತ್ತಮವಾಗಿ ಕಾರ‌್ಯನಿರ್ವಹಿಸಿದ ಚರ್ಮರೋಗ ತಜ್ಞವೈದ್ಯ ಡಾ.ವಿಜಯಕುಮಾರ್,ಐಸಿಟಿಸಿ ಸಿಬ್ಬಂದಿ ಎಂ.ಎಚ್.ಪ್ರಕಾಶ,ಪಿ.ಡಿ.ರಮೇಶ್, ಮರುಳಸಿದ್ದಗೌಡ,ವೈ.ಎ.ಜಿತೇಂದ್ರ,ಕ್ಷೇತ್ರ ಕಾರ‌್ಯಕರ್ತೆ ರೋಜಿಇಲಿಯಾಸ್‌ಪರದೇಶಿ,ಸಮುದಾಯ ಆರೋಗ್ಯ ಕಾರ‌್ಯಕರ್ತ ದೇವರಾಜು, ಸಂಪರ್ಕ ಕಾರ‌್ಯಕರ್ತೆ ಶಾಂತಮ್ಮ,ವಿಜ್ಞಾನ ಶಿಕ್ಷಕ ಟಿ.ಎಸ್.ನಾಗಭೂಷಣ್ ಅವರನ್ನು ಸನ್ಮಾನಿಸಲಾಯಿತು.

ವಿವಿಧ ಕಾಲೇಜುಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ರೆಡ್‌ರಿಬ್ಬನ್ ಕ್ಲಬ್ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಮಹಾರಾಜ ಮ ದಕರಿ ನಾಯಕ ಕಾಲೇಜು ಎನ್‌ಎಸ್‌ಎಸ್ ಸಂಚಾಲಕಿ ಪ್ರೊ.ಎನ್.ಟಿ.ಗಂಗಮ್ಮ, ಪ್ರೊ.ಎನ್.ಶ್ರೀನಿವಾಸ್, ಡಾ.ಧನಂಜಯ್, ಜಿಲ್ಲಾಸ್ಪತ್ರೆ ಎಆರ್ ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ರೂಪಶ್ರೀ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net