ಎಚ್.ಪಿ.ಮಂಜುನಾಥ್ ರೋಡ್ ಶೋ

IMG20230429174045
Published on

ಧರ್ಮಾಪುರ: ರತ್ನಪುರಿ ಗ್ರಾಮದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಎಚ್.ಪಿ.ಮಂಜುನಾಥ್ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು.

ಕಾಂಗ್ರೆಸ್ ಪಕ್ಷವು ಬಡವರ, ಶೋಷಿತರ, ದೀನ-ದಲಿತರ, ಕೂಲಿ ಕಾರ್ಮಿಕರ ಪರವಾಗಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಅನ್ನಭಾಗ್ಯ ಯೋಜನೆ ಅಡಿ ತಲಾ ಹತ್ತು ಕೆಜಿ ಉಚಿತ ಅಕ್ಕಿ, ಗೃಹಲಕ್ಷ್ಮಿ , ಗೃಹಜ್ಯೋತಿ, ಪದವಿ ಹಾಗೂ ಡಿಪ್ಲೊಮಾ ನಿರುದ್ಯೋಗಿಗಳಿಗೆ ಭತ್ಯೆ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.

ಕಳೆದ 15 ವರ್ಷಗಳಿಂದ ತಾಲೂಕಿನಲ್ಲಿ ಶಿಕ್ಷಣ, ನೀರಾವರಿ, ಆರೋಗ್ಯ, ಕೃಷಿ, ಕ್ರೀಡೆ ಸೇರಿದಂತೆ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಾ ಬಂದಿದ್ದೇನೆ. ಮುಂದೆಯೂ ನಿಮ್ಮ ಸೇವೆಗಳನ್ನು ಮಾಡಲು ತಾಲೂಕಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು. ಇದಕ್ಕೂ ಮುನ್ನ ಗ್ರಾಮದ ಗಣಪತಿ ದೇವಾಲಯ ಹಾಗೂ ಜಮಲ್ ಬಿಬಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಜೆಸಿಬಿಯಿಂದ ಹೂ ಮಳೆಗೈದು ಅಭಿಮಾನ ಮೆರೆದರು.

ಉದ್ದೂರ್ ಕಾವಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಭದ್ರಸ್ವಾಮಿ, ಪಿ.ವಿ.ನಾರಾಯಣ್, ಕಲ್ಕುಣಿಕೆ ರಮೇಶ್, ದೇವರಾಜ್, ಕುರುಬ ಸಮಾಜದ ಅಧ್ಯಕ್ಷ ಡಿ.ಕೆ.ಕುನ್ನೇಗೌಡ, ಡಿಎಸ್‌ಎಸ್ ಹಿರಿಯ ಮುಖಂಡ ಹರಿಹರ ಆನಂದಸ್ವಾಮಿ, ರತ್ನಪುರಿ ಪುಟ್ಟಸ್ವಾಮಿ, ಮುಖಂಡರಾದ ಅಜ್ಗರ್ ಪಾಷ, ಶಿವಣ್ಣ, ಶರವಣ, ಗ್ರಾ.ಪಂ. ಸದಸ್ಯರಾದ ಜ್ಯೋತಿಬಾಯಿ, ರೇವತಿ, ನಾಗೇಶ್‌ರಾವ್ ಮೆಂಗಾಣಿ, ಮನುಕುಮಾರ್, ಉದ್ಯಮಿಗಳಾದ ನಾಡಪ್ಪನಹಳ್ಳಿ ರಾಜು ಶಿವರಾಜೇಗೌಡ, ಟಿ.ಕೃಷ್ಣ, ಮಹಮ್ಮದ್ ರಫೀಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net