ಎಚ್.ಡಿ.ಕೋಟೆ, ಸರಗೂರು ಸಮಗ್ರ ಅಭಿವೃದ್ಧಿ

04 SARAG 2
Published on

ಸರಗೂರು: ಎಚ್.ಡಿ.ಕೋಟೆ, ಸರಗೂರು ತಾಲೂಕಿನ ಜನತೆ ನನ್ನನ್ನು 2ನೇ ಬಾರಿಗೆ ಶಾಸಕನಾಗಿ ಆಯ್ಕೆ ಮಾಡಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.


ತಾಲೂಕಿನ ಪಟ್ಟಣದ ನಾಮಧಾರಿಗೌಡ ಸಮಾಜ ವತಿಯಿಂದ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನನ್ನ ಮೇಲೆ ನಂಬಿಕೆ ಇಟ್ಟು ಜನರು ನನ್ನನ್ನು ಶಾಸಕನಾಗಿ ಆರಿಸಿದ್ದು, ತಾಲೂಕಿನಲ್ಲಿ ಶಿಕ್ಷಣ, ಆರೋಗ್ಯ, ಸೇರಿದಂತೆ ಎರಡೂ ಪಟ್ಟಣಗಳ ಬೆಳವಣಿಗೆಗೆ ಕ್ರಮ ವಹಿಸುತ್ತೇನೆ. ಕಳೆದ ಬಾರಿ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗಲೂ ಹೆಚ್ಚು ಅನುದಾನ ತಂದು ಕ್ಷೇತ್ರ ಗ್ರಾಮಗಳಿಗೆ ಅಭಿವೃದ್ಧಿ ಬಳಸಿದ್ದೇನೆ. ಈ ಬಾರಿ ನಮ್ಮ ಸರ್ಕಾರ ಅಧಿಕಾರದಲ್ಲಿದ್ದು, ಇನ್ನೂ ಹೆಚ್ಚಿನ ಅನುದಾನ ತರಲಾಗುವುದು ಎಂದು ತಿಳಿಸಿದರು.
ನಾಮಧಾರಿಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಹಾಗೂ ನಾಮಧಾರಿ ಸಮಾಜವನ್ನು 2-ಎ ವರ್ಗಕ್ಕೆ ಸೇರಿಸಿ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.


ಸಮಾಜದ ಮುಖಂಡರಾದ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಜಿತ್‌ಕುಮಾರ್, ಕುಮಾರಿ ನಂಜಪ್ಪ, ಲಕ್ಷ್ಮೀ ರಮೇಶ್, ಭಾರತಿ ಚಿನ್ನಪ್ಪ, ರೂಪಾ ಸುಬ್ರಹ್ಮಣ್ಯ, ಸಿ.ಎನ್.ಚಂದ್ರಶೇಖರಮೂರ್ತಿ ಹಾಗೂ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.


ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ರವಿ, ರಾಜ್ಯ ಬೀಜ ನಿಗಮದ ಮಾಜಿ ಅಧ್ಯಕ್ಷ ಡಿ.ಸುಂದರ್‌ದಾಸ್ ಮಾತನಾಡಿದರು. ಅಖಿಲ ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಎನ್.ಭೀಮರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಸಿ.ಬಸಪ್ಪ, ತಾ.ಪಂ. ಮಾಜಿ ಅಧ್ಯಕ್ಷೆ ಯಶೋದಮ್ಮ ನಾಗರಾಜು, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎನ್.ಮಲ್ಲಿಕಾರ್ಜುನ್, ಟಿಎಪಿಸಿಎಂಎಸ್ ಸದಸ್ಯ ಗುಣಪಾಲ್, ಸಮಾಜದ ಗೌರವಾಧ್ಯಕ್ಷ ಎಚ್.ಡಿ.ರತ್ನಯ್ಯ, ಕಾರ್ಯಾಧ್ಯಕ್ಷ ಸಿ.ಪಿ.ಬಸವರಾಜು, ಅಭಿಕುಮಾರ್, ಮಾಜಿ ಕಾರ್ಯದರ್ಶಿ ಬಿ.ಎಂ.ಚಿನ್ನಪ್ಪ, ವೈ.ಪಿ.ನಾಗರಾಜು ಮುಖಂಡರಾದ ಹರಿದಾಸ್, ಅಶೋಕ್, ಪಿಎಸ್ ಐ ನಂದೀಶ್ ಕುಮಾರ್, ನಾಗೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net