

ಸರಗೂರು: ಅಂಗವಿಕಲರಿಗೆ ನೆರವಾಗುವ ನಿಟ್ಟಿನಲ್ಲಿ ತಮ್ಮ ಶಾಸಕ ಅನುದಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಎಚ್.ಡಿ.ಕೋಟೆ-ಸರಗೂರು ತಾಲೂಕಿಗೆ ತಲಾ ಮೂರು ತ್ರಿವೀಲ್ ಬೈಕ್ ಅನ್ನು ನೀಡುವುದಾಗಿ ಶಾಸಕ ಅನಿಲ್ ಚಿಕ್ಕಮಾದು ಭರವಸೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಸಾಧನ-ಸಲಕರಣೆ ವಿತರಿಸಿ ಮಾತನಾಡಿ, ತಾಲೂಕಿನ ಅಂಗವಿಕ;ರಿಗೆ ತೊಂದರೆ ಆಗದಂತೆ ಆಸ್ಪತ್ರೆಗಳಲ್ಲಿ ಪ್ರತಿನಿತ್ಯ ಯುಡಿಐಡಿ ಕಾರ್ಡ್ ಮಾಡಿಕೊಡಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಎಂಆರ್‌ಡಬ್ಲುೃ ವಿಕಲಚೇತನರ ಅಧಿಕಾರಿ ದೇವರಾಜು ಮಾತನಾಡಿ, ಸರಗೂರು ತಾಲೂಕಿನಲ್ಲಿ 1300 ಅಂಗವಿಕಲರು ಇದ್ದಾರೆ. ಇವರಲ್ಲಿ 1000 ಅಂಗವಿಕಲರು ಯುಡಿಐಡಿ ಕಾರ್ಡ್ ಪಡೆದಿದ್ದಾರೆ. ಇನ್ನು ಉಳಿಕೆ 300 ಜನರಿಗೆ ಯುಡಿಐಡಿ ಕಾರ್ಡ್ ಆಗಬೇಕಾಗಿದೆ ಎಂದು ತಿಳಿಸಿದರು.
ಹೊಲಿಗೆ ಯಂತ್ರ, ಸೊಲರ್ ಲೈಟ್, ವೀಲ್‌ಚೇರ್ ಇತರ ಸಾಧನ ಸಲಕರಣೆಗಳನ್ನು ಫಲಾನುಭವಿಗೆ ವಿತರಿಸಲಾಯಿತು. ಪ.ಪಂ. ಸದಸ್ಯ ಶ್ರೀನಿವಾಸ, ಜಿ.ಪಂ ಮಾಜಿ ಸದಸ್ಯ ಚಿಕ್ಕವೀರ ನಾಯಕ, ಪ.ಪಂ. ಮಾಜಿ ಸದಸ್ಯರಾದ ನಾಗರಾಜ್, ಶಿವಶಂಕರ್, ತಾಪಂ ಇಓ ಸುಷ್ಮಾ, ಎಸೈ ನಂದೀಶ್ ಕುಮಾರ್ ಇತರರು ಇದ್ದರು.