ಎಚ್.ಟಿ.ರಾಜೇಂದ್ರ ಮಾದರಿ ನಾಯಕ

bhr RAJE
ಜೆಡಿಎಸ್ ಮುಖಂಡ ಎಚ್.ಟಿ.ರಾಜೇಂದ್ರಗೆ ಬಾಳೆಹೊನ್ನೂರಿನ ಜೆಡಿಎಸ್ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆ.ಆರ್.ದೀಪಕ್, ಕೆ.ಟಿ.ಗೋವಿಂದೇಗೌಡ, ಅತಿಶಯ್, ಉದಯ್ ಸುವರ್ಣ, ಕೆ.ಸಿ.ವೆಂಕಟೇಶ ಇದ್ದರು.
Published on

ಬಾಳೆಹೊನ್ನೂರು: ಜೆಡಿಎಸ್ ನಾಯಕ ಎಚ್.ಟಿ.ರಾಜೇಂದ್ರ ರಾಜಕಾರಣಿಗಳಿಗೆ ಮಾದರಿಯಾಗಿದ್ದರು ಎಂದು ಹೋಬಳಿ ಜೆಡಿಎಸ್ ಅಧ್ಯಕ್ಷ ಕೆ.ಆರ್.ದೀಪಕ್ ಮರಿಗೌಡ ಹೇಳಿದರು.

ಜೆಡಿಎಸ್ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ರಾಜೇಂದ್ರ ಅವರು ಅಪಾರ ಜನ ಬೆಂಬಲ ಗಳಿಸಿದ್ದು, ಉತ್ತಮ ಜ್ಞಾನ ಸಂಪಾದನೆ ಮಾಡಿದ್ದರು. ಎಲ್ಲ ವಿಚಾರಗಳಲ್ಲೂ ಪಾಂಡಿತ್ಯ ಹೊಂದಿದ್ದ ಅವರು, ಸರಳ, ಸಜ್ಜನಿಕೆಯ ಬದುಕನ್ನು ರೂಢಿಸಿಕೊಂಡಿದ್ದರು ಎಂದರು.

ರಾಜೇಂದ್ರ ಅವರು ಹುದ್ದೆಯ ಬೆನ್ನತ್ತಿ ಹೋಗಿದ್ದರೆ ಸಚಿವ ಸ್ಥಾನವನ್ನೇ ಪಡೆಯಬಹುದಿತ್ತೇನೋ. ಆದರೆ ಅದ್ಯಾವುದನ್ನೂ ಬಯಸದೆ ನಿಸ್ವಾರ್ಥದಿಂದ ಕೆಲಸ ಮಾಡುತ್ತಿದ್ದರು. ಎಲ್ಲ ಪಕ್ಷದವರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು ಎಂದರು.

ಜೆಡಿಎಸ್ ಖಾಂಡ್ಯ-ಬಾಳೆಹೊನ್ನೂರು ವಿಭಾಗದ ಅಧ್ಯಕ್ಷ ಕೆ.ಟಿ.ಗೋವಿಂದೇಗೌಡ ಮಾತನಾಡಿ, ಎಚ್.ಟಿ.ರಾಜೇಂದ್ರ ಅವರ ನಿಧನ ಪಕ್ಷ, ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಪಕ್ಷ, ಕಾರ್ಯಕರ್ತರಿಗಾಗಿ ಅವರು ಕೆಲಸ ಮಾಡುತ್ತಿದ್ದರು ಎಂದು ಹೇಳಿದರು.

ಜೆಡಿಎಸ್ ಮುಖಂಡರಾದ ಎಂ.ಆರ್.ಅತಿಶಯ್, ಉದಯ್ ಸುವರ್ಣ, ಕೆ.ಸಿ.ವೆಂಕಟೇಶ್, ಚಂದ್ರೇಗೌಡ, ರವೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net