ಎಚ್.ಐ.ವಿ. ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಹರಡುವುದನ್ನು ತಪ್ಪಿಸಬಹುದು: ಡಾ. ಬಿ. ಸಂದ್ಯಾ

ಎಚ್.ಐ.ವಿ. ಸೋಂಕಿತ ಗರ್ಭಿಣಿಯಿಂದ ಮಗುವಿಗೆ ಹರಡುವುದನ್ನು ತಪ್ಪಿಸಬಹುದು: ಡಾ. ಬಿ. ಸಂದ್ಯಾ
Published on


ಆಲೂರು: ತಾಯಿಯಿಂದ ಮಗುವಿಗೆ ಹರಡುವ ಹೆಚ್.ಐ.ವಿ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಬಹುದು ಎಂದು ಡಾ. ಬಿ. ಸಂಧ್ಯಾ ತಿಳಿಸಿದರು.


ಕುಪ್ಪೆ ಗಾಮದಲ್ಲಿ ಬುಧವಾರ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ, ಐಸಿಟಿಸಿ ವಿಭಾಗ ಆಲೂರು ಮತ್ತು  ಫ್ಲೋರೆನ್ಸ ಫೋರಾ ಫಾರ್ಮ ಕುಪ್ಪೆ ರವರ ಸಂಯುಕ್ತಾಶ್ರಯದಲ್ಲಿ, ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ದೇಶಿಸಿ ಮಾತನಾಡಿ, ಹೆಚ್.ಐ.ವಿ ಸೊಂಕಿತ ವ್ಯಕ್ತಿಯಿಂದ ರಕ್ತವನ್ನು ಪಡೆಯುವುದರಿಂದ, ಸೂಜಿ ಸಿರೆಂಜ್ ಬಳಸುವುದರಿಂದ, ವ್ಯಕ್ತಿಯ ಜೊತೆ ಅಸುರಕ್ಷಿತ ಲೈಂಗಿಕ ಸಂಪರ್ಕವನ್ನು ಹೊಂದುವುದರಿAದ ಬರುತ್ತದೆ. ಸೋಂಕಿತ ತಾಯಿಯಿಂದ ಮಗುವಿಗೆ ಬರುವ ಸಾಧ್ಯತೆ ಇರುತ್ತದೆಯಾದರೂ, ಗರ್ಭಿಣಿಯಾದ ಸಂದರ್ಭದಲ್ಲಿ ಅಗತ್ಯ ಚಿಕಿತ್ಸೆ ನೀಡಿದರೆ ಮಗುವಿಗೆ ಹರಡದಂತೆ ತಡೆಯಬಹುದು. ಹೆಚ್.ಐ.ವಿ.ಯನ್ನು ರಕ್ತ ಪರೀಕ್ಷೆಯಿಂದ ಮಾತ್ರ ಪತ್ತೆ ಮಾಡಬಹುದು. ಪಾಸಿಟೀವ್ ಕಂಡುಬAದರೆ ಅತಂಕ ಪಡದೆ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಎ.ಆರ್.ಟಿ ಚಿಕಿತ್ಸೆಯಿಂದ ನಿಯಂತ್ರಣ ಮಾಡಿಕೊಳ್ಳಬಹುದು ಎಂದರು.


ತಾ. ಆರೋಗ್ಯಾಧಿಕಾರಿ ಡಾ. ಎಚ್. ಆರ್. ತಿಮ್ಮಯ್ಯರವರು, ಒಬ್ಬ ವ್ಯಕ್ತಿ ಒಂದು ಬಾರಿ ರಕ್ತದಾನ ಮಾಡುವುದರಿಂದ ೪ ಅಮೂಲ್ಯ ಜೀವಗಳನ್ನು ಉಳಿಸಬಹುದು. ರಕ್ತದಾನ ಮಾಡಿದಂತಹ ವ್ಯಕ್ತಿ ರಕ್ತ ಶುದ್ಧೀಕರಣವಾಗಿ ಆರೋಗ್ಯದಿಂದಿರಬಹುದು. ಬಾಣಂತಿಯರು, ಗರ್ಭಿಣಿಯರು, ಖಾಯಿಲೆಗೆ ಒಳಗಾದವರು ರಕ್ತದಾನ ಮಾಡುವಂತಿಲ್ಲ ಎಂದರು.

 
ಶಿಬಿರದಲ್ಲಿ ೧೪೦ ಜನರಿಗೆ ಹೆಚ್.ಐ.ವಿ. ಮತ್ತು ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.ಕಾರ್ಯಕ್ರಮದಲ್ಲಿ  ಹಾಸನ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ. ಎಂ. ವಿಜಯ್, ತಾಲ್ಲೂಕು  ರಾಷ್ಟಿçಯ ಬಾಲ ಸ್ವಾಸ್ಥö್ಯ ಕಾರ್ಯಕ್ರಮದ ವೈದಾಧಿಕಾರಿ ಡಾ. ಶಾಮಲ, ಡಾ.ಸಂಪ್ರೀತ ಮತ್ತು ತಾಲ್ಲೂಕು ಆಸ್ಪತ್ರೆ ಸಿಬ್ಬಂದಿಗಳು ಭಾಗವಹಿಸಿದ್ದರು.
ಫೋಟೋ ಕ್ಯಾಫ್ಶನ್ಸ್ : ಆಲೂರು ತಾ. ಕುಪ್ಪೆ ಗಾಮದಲ್ಲಿ ಸಮುದಾಯ ಆಧಾರಿತ ಆರೋಗ್ಯ ತಪಾಸಣಾ ಶಿಬಿರವನ್ನು ಡಾ. ಬಿ. ಆರ್. ಸಂದ್ಯಾ ಉದ್ಘಾಟಿಸಿದರು. ಡಾ. ಎಚ್. ಆರ್. ತಿಮ್ಮಯ್ಯ. ಡಾ. ಬಿ. ಎಂ. ವಿಜಯ್,   ಡಾ. ಶಾಮಲ, ಡಾ.ಸಂಪ್ರೀತ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net