

ವಿಜಯಪುರ: ವೈಜ್ಞಾನಿಕತೆ, ವೈಚಾರಿಕತೆಯ ವಿಷಯವಾಗಿ ಪವಾಡ ಬಯಲು ಕಾರ್ಯಕ್ರಮ, ಮೂಢ ನಂಬಿಕೆಗಳನ್ನು ತೊಲಗಿಸುವ ನಿಟ್ಟಿನಲ್ಲಿ ತನ್ನದೇ ಆದ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ - ಬೆಂಗಳೂರು ಸಂಸ್ಥೆಯು ಎಚ್ ಎನ್ ಪ್ರಶಸ್ತಿಯನ್ನು ಈ ವರ್ಷದಿಂದ ನೀಡುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದು ಸಂಸ್ಥಾಪಕರಾದ ಹುಲಿಕಲ್ ನಟರಾಜ್ ತಿಳಿಸಿದ್ದಾರೆ.
ಪ್ರಶಸ್ತಿ ಪಡೆಯಲು ಕೆಲ ಶರತ್ತುಗಳನ್ನು ಅನ್ವಹಿಸಲಾಗಿದ್ದು, ಅವುಗಳು ಈ ಕೆಳಗಿನಂತಿವೆ.
೧)50 ವರ್ಷ ಮೇಲ್ಪಟ್ಟವರಾಗಿರಬೇಕು.
೨)ನಾಡಿನಾದ್ಯಂತ ವೈಚಾರಿಕತೆ, ವೈಜ್ಞಾನಿಕತೆಯ ಉಪನ್ಯಾಸ ನೀಡಿರುವ, ಪವಾಡ ಬಯಲು ಕಾರ್ಯಕ್ರಮ ಮಾಡಿರುವ ಧಾಖಲೆ, ಪತ್ರಿಕಾ ವರದಿಗಳನ್ನು ಅರ್ಜಿಯ ಜೊತೆ ನೀಡಬೇಕು.
೩)ಶಾಲೆಗಳಲ್ಲಿ, ಇನ್ನಿತರ ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡಿರುವ ಫೋಟೋ ಮತ್ತು ವರದಿ ನೀಡಬೇಕು.
೪)ಬೇರೆ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿದ್ದರೆ ಅದರ ಮಾಹಿತಿ ನೀಡಬೇಕು.
೫)ಕನ್ನಡ ನಾಡು ನುಡಿಗೆ ತನ್ನದೇ ಆದ ಸೇವೆ ಸಲ್ಲಿಸುತ್ತಿರಬೇಕು.
೬)ರಾಜಕೀಯ ಮತ್ತು ಅಪರಾಧ ಹಿನ್ನಲೆ ಇರಬಾರದು.
೭)ಆಧಾರ ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕು.
೮)ಪರಿಷತ್ತಿನ ಪಧಾಧಿಕಾರಿ ಆಗಿರಬಾರದು, ಪರಿಷತ್ತಿನ ಸದಸ್ಯರು ಆಗಿರಬಹುದು.
ಆಸಕ್ತರು ತಮ್ಮ ಅರ್ಜಿಗಳನ್ನು 2021 ನವೆಂಬರ್ 5 ರೊಳಗೆ ಆಯಾ ತಾಲೂಕಿನ
ಅದ್ಯಕ್ಷರುಗಳಿಗೆ ಅಥವಾ ಪದಾಧಿಕಾರಿಗಳಿಗೆ ಸಲ್ಲಿಸಬೇಕು.
ವಿಜಯಪುರ ಜಿಲ್ಲೆಗೆ ಸಂಭಂದಿಸಿದಂತೆ ಪರಮಾನಂದ ನಿರ್ವಾಣಶೆಟ್ಟಿ 9620344019 ಅವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ವಿಜಯಪುರ ಜಿಲ್ಲಾ ಘಟಕಕ್ಕೂ ಅರ್ಜಿ ಸಲ್ಲಿಸಬಹುದಾಗಿದೆ.