ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಮನವಿ

10krp-002
ಅಕ್ಕಿಹೆಬ್ಬಾಳು ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಾಡಿಗಳ ಶಾಶ್ವತ ನಿಲುಗಡೆಗಾಗಿ ಸದರನ್ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.
Published on

ಕೆ.ಆರ್.ಪೇಟೆ: ಅಕ್ಕಿಹೆಬ್ಬಾಳು ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಾಡಿಗಳ ನಿಲುಗಡೆಗಾಗಿ ಸದರನ್ ರೈಲ್ವೆ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಜನರಲ್ ಮ್ಯಾನೇಜರ್ ಅಕ್ಕಿಹೆಬ್ಬಾಳು ರೈಲ್ವೆ ಸ್ಟೇಷನ್‌ಗೆ ಪರಿಶೀಲನೆಗಾಗಿ ಭೇಟಿ ನೀಡಿದ ಸಂದರ್ಭ ಅಕ್ಕಿಹೆಬ್ಬಾಳು ಗ್ರಾಮಸ್ಥರು ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಗೆ ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡರು.

ಅಕ್ಕಿಹೆಬ್ಬಾಳು ತಾಲೂಕು ಒಂದು ಪ್ರಮುಖ ಹೋಬಳಿ ಕೇಂದ್ರವಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಲಕ್ಷಾಂತರ ಜನರು ರೈಲು ಸೇವೆಯನ್ನೇ ಅವಲಂಬಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು.

ಇದೇ ವೇಳೆ ಜನರಲ್ ಮ್ಯಾನೇಜರ್ ಅವರಿಗೆ ಗ್ರಾಮಸ್ಥರಿಂದ ಗೌರವ ಅಭಿನಂದನೆ ಸಲ್ಲಿಸಲಾಯಿತು. ಮೈಸೂರು ವಿಭಾಗದ ರೈಲ್ವೆ ಪ್ರಬಂಧಕ ರಾಹುಲ್ ಅಗರವಾಲ್ ಮತ್ತಿತರ ಅಧಿಕಾರಿಗಳಿದ್ದರು.

ಗ್ರಾಮದ ಮುಖಂಡರಾದ ಹೇಮಾವತಿ ಹೊನ್ನಾರು ವೇದಿಕೆಯ ಎಸ್.ಮಹಾಲಿಂಗು, ಎ.ಸಿ.ಮಂಜೇಗೌಡ, ಎ.ಆರ್.ರಾಜ ನಾಯಕ, ಅಕ್ಕಿಹೆಬ್ಬಾಳು ಹೋಬಳಿ ಬಿಜೆಪಿ ಅಧ್ಯಕ್ಷ ವಾಸು, ಎ.ಬಿ.ಮಹೇಶ್‌ಕುಮಾರ್, ಮಹೇಶ್‌ನಾಯಕ್, ತಾಲೂಕು ಕುಂಚ ಕಲಾವಿದರ ಅಧ್ಯಕ್ಷ ಆನಂದಾಚಾರಿ, ವಿಠಲ್ರಾವ್, ಸೊಸೈಟಿ ಮಂಜಣ್ಣ, ಮಾಜಿ ಚೇರ್ಮನ್ ಜವರೇಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net